Breaking News
Home / ರಾಜಕೀಯ / ಬೆಳಗಾವಿ: ಜಿಐಟಿಯಲ್ಲಿ ಪುಸ್ತಕ ಬಿಡುಗಡೆ

ಬೆಳಗಾವಿ: ಜಿಐಟಿಯಲ್ಲಿ ಪುಸ್ತಕ ಬಿಡುಗಡೆ

Spread the love

ಬೆಳಗಾವಿ: ಇಲ್ಲಿನ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ‘ಕೆಒಎಚ್‌ಎ-ಎಲ್‌ಐಎಸ್‌ಎ: ವರ್ಕಿಂಗ್ ಯೂಸರ್ ಮ್ಯಾನುಯಲ್’ ಎಂಬ ಪುಸ್ತಕವನ್ನು ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಕರ್ನಾಟಕ ಕಾನೂನು ಸಂಸ್ಥೆಯ ಉಪಾಧ್ಯಕ್ಷ ಆರ್.ಬಿ. ಭಂಡಾರೆ, ಜಿಐಟಿ ಆಡಳಿತ ಮಂಡಳಿ ಸದಸ್ಯ ಎಸ್.ವಿ. ಗಣಾಚಾರಿ ಮತ್ತು ಪ್ರಾಂಶುಪಾಲ ಡಾ.ಜಯಂತ ಕೆ. ಕಿತ್ತೂರ ಈಚೆಗೆ ಬಿಡುಗಡೆ ಮಾಡಿದರು.

ಪುಸ್ತಕವನ್ನು ಬೆಂಗಳೂರಿನ ಎಲ್‌ಐಎಸ್ ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವಿ. ಕೊಣ್ಣೂರ ಅವರ ಮುನ್ನುಡಿ ಟಿಪ್ಪಣಿಯೊಂದಿಗೆ ಪ್ರಕಟಿಸಲಾಗಿದೆ. ರವಿ ಒಡೆಯರ, ಬಸವರಾಜ ಎಸ್. ಕುಂಬಾರ ಮತ್ತು ಅರುಣ ಅದ್ರಕಟ್ಟಿ ಸಂಕಲನ ಮಾಡಿದ್ದಾರೆ. ಕೆಒಎಚ್‌ಎ ತಂತ್ರಾಂಶದ ಅನುಷ್ಠಾನದ ಬಗ್ಗೆ ಹಂತ ಹಂತದ ಜ್ಞಾನ ಪಡೆಯುವ ಎಲ್ಲಾ ಬಳಕೆದಾರರು, ಗ್ರಂಥಾಲಯ ವೃತ್ತಿಪರರು ಮತ್ತು ಗ್ರಂಥಾಲಯ ವಿಜ್ಞಾನ ವಿದ್ಯಾರ್ಥಿಗಳಿಗೆ ಈ ಪುಸ್ತಕವು ಉಪಯುಕ್ತವಾಗಿದೆ. ಬಸವರಾಜ ಕುಂಬಾರ ಅವರು ಕೆಎಲ್‌ಎಸ್ ಜಿಐಟಿಯ ಗ್ರಂಥಪಾಲಕರಾಗಿದ್ದು, ಅವರು ‘ಕೆಒಎಚ್‌ಎ’ ಅನುಷ್ಠಾನಗೊಳಿಸಲು ವಿವಿಧ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ವಿವಿಧ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ತಜ್ಞರಾಗಿ ಭೇಟಿ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ