Breaking News

ರಾಜ್ಯದಾದ್ಯಂತ ಸಂಚರಿಸಲು ಕೋಟಿ ರೂಪಾಯಿಯ ಕಾರು ಖರೀದಿಸಿದ ಬಿಎಸ್‌ವೈ

Spread the love

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೊಸ ಟೊಯೊಟಾ ವೆಲ್‌ಫೈರ್‌ ಕಾರನ್ನು ಖರೀದಿ ಮಾಡಿದ್ದು, ತೆರಿಗೆ ಸೇರಿ ಇದರ ಮೌಲ್ಯ ₹1 ಕೋಟಿ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಕಾರು ಬಳಸುತ್ತಿದ್ದರು. ಈಗ ಹೆಚ್ಚು ದೂರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ಈ ಕಾರು ಖರೀದಿ ಮಾಡಿದ್ದಾರೆ. ಇದರ ಮೂಲ ಬೆಲೆ ₹87 ಲಕ್ಷ. ಈಗಾಗಲೇ ನೋಂದಣಿ ಮಾಡಿಸಿದ್ದು, ಶುಕ್ರವಾರ ಶಿವಮೊಗ್ಗಕ್ಕೆ ಇದೇ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ.

ಹಿರಿಯ ಸಚಿವರೊಬ್ಬರ ಬಳಿ ಇಂತಹದ್ದೇ ಕಾರು ನೋಡಿದ್ದರು. ಒಳಗೆ ಹೆಚ್ಚು ಜಾಗ ಇದೆ. ಕಾರಿನ ಸೀಟನ್ನೇ ಹಾಸಿಗೆಯಂತೆ ಮಡಿಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಚುನಾವಣೆ ಓಡಾಟಕ್ಕೆ ಈ ಕಾರನ್ನು ಬಳಸಲಿದ್ದಾರೆ. ಕೆಲವು ಸಚಿವರು, ವಿರೋಧ ಪಕ್ಷಗಳ ನಾಯಕರು ಇದಕ್ಕಿಂತ ದುಬಾರಿ ಮೌಲ್ಯದ ಕಾರು ಹೊಂದಿದ್ದಾರೆ. ಅವುಗಳಿಗೆ ಹೋಲಿಸಿದರೆ ಈ ಕಾರು ಅಷ್ಟೇನು ಐಷಾರಾಮಿ ಅಲ್ಲ ಎಂದು ಯಡಿಯೂರಪ್ಪ ಅವರ ಆಪ್ತ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ