Breaking News

ಸೂಪರ್ ಮಾರ್ಕೆಟ್ ತಿಂಡಿ ಮೇಲೆ ಉಗುಳಿದ್ದ ಮಹಿಳೆಗೆ ಜೈಲು

Spread the love

ಕೊರೊನಾ, ಇಡೀ ವಿಶ್ವದ ಚಿತ್ರಣವನ್ನು ಬದಲಿಸಿದೆ. ಇಡೀ ಜಗತ್ತು ಕೊರೊನಾ ಭಯದಲ್ಲಿದೆ. ಕೊರೊನಾದಿಂದ ಹೊರ ಬರಲು ಎಲ್ಲ ಪ್ರಯತ್ನ ನಡೆಯುತ್ತಿದೆ.

ಈ ಮಧ್ಯೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೊರೊನಾ ಸೋಂಕು ಹರಡಲು ಮುಂದಾಗಿದ್ದ ಅಮೆರಿಕಾ ಮಹಿಳೆಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಕೊರೊನಾ ಹರಡಲು ಮುಂದಾಗಿದ್ದ ಮಹಿಳೆಯ ಈ ಪ್ರಯತ್ನ ಅತ್ಯಂತ ಅಪಾಯಕಾರಿ ಮತ್ತು ಅಸಹ್ಯಕರವಾಗಿತ್ತು. ಪೆನ್ಸಿಲ್ವೇನಿಯಾದ ಸೂಪರ್‌ ಮಾರ್ಕೆಟ್‌ನಲ್ಲಿ ಮಹಿಳೆ ಉದ್ದೇಶಪೂರ್ವಕವಾಗಿ ಆಹಾರಕ್ಕೆ ಎಂಜಲು ಹಾಕಿದ್ದಳು. ಕಫವನ್ನು ಉಗುಳಿದ್ದ ಮಹಿಳೆ ನನಗೆ ಕೊರೊನಾ ಇದೆ ಎಂದಿದ್ದಳು.

ಕಳೆದ ವರ್ಷ ಮಾರ್ಚ್‌ನಲ್ಲಿ, ಮಾರ್ಗರೆಟ್ ಆನ್ ಸಿರ್ಕೊ ಎಂಬ ಮಹಿಳೆ ಅಮೆರಿಕದ ಪೆನ್ಸಿಲ್ವೇನಿಯಾದ ಗೆರ್ರಿಟಿಯ ಸೂಪರ್‌ ಮಾರ್ಕೆಟ್‌ನಲ್ಲಿ ಆಹಾರ ಸೇವಿಸುವಾಗ ಉದ್ದೇಶಪೂರ್ವಕವಾಗಿ ಉಗುಳಿದ್ದಳು. ಈ ಘಟನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಈಗ ಮಹಿಳೆಗೆ ಕೋರ್ಟ್, 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನಂತ್ರ 8 ವರ್ಷಗಳ ಕಾಲ ಪೊಲೀಸ್ ಕಣ್ಣು ಈಕೆ ಮೇಲಿರಲಿದೆ.

ಮಹಿಳೆ ಈ ಕೆಲಸದ ನಂತ್ರ ಸೂಪರ್ ಮಾರ್ಕೆಟ್ 35 ಸಾವಿರ ಡಾಲರ್ ಅಂದರೆ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಆಹಾರವನ್ನು ಎಸೆದಿತ್ತು. ದಂಡದ ರೂಪದಲ್ಲಿ ಮಾರ್ಗರೆಟ್ ಸೂಪರ್ ಮಾರ್ಕೆಟ್ ಗೆ 30,000 ಡಾಲರ್ ಪಾವತಿಸಬೇಕಾಗಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ