Breaking News

ಉಗ್ರರ ಉಪಟಳಕ್ಕೆ ಲಗಾಮು ಹಾಕುವುದು ಅನಿವಾರ್ಯ

Spread the love

ಅಫ್ಘಾನಿಸ್ತಾನವನ್ನು ತಾಲಿಬಾನಿ ಗುಂಪು ವಶಕ್ಕೆ ಪಡೆದ ಬಳಿಕ, ಕೆಲ ಗಂಟೆಗಳ ಕಾಲ ಶಾಂತಿ ಪ್ರಿಯವಾಗಿದ್ದೇವೆ ಎನ್ನುವ ಮಾತನ್ನು ಹೇಳಿಕೊಂಡಿತ್ತು. ಈ ಮಾತು ತಾಲಿಬಾನ್ ಉಗ್ರರು ಹೇಳಿದಾಗ ಬಹುತೇಕ ರಾಷ್ಟ್ರಗಳು ಒಪ್ಪದಿದ್ದರೂ, ಬಹುತೇಕ ರಾಷ್ಟ್ರಗಳು ತಟಸ್ಥ ನೀತಿಯನ್ನು ಅನುಸರಿಸಿದ್ದವು.

 

ಆದರೆ ಅಧಿಕಾರ ಹಿಡಿದ ಮರುದಿನವೇ ತಮ್ಮ ಉಪಟಳವನ್ನು ತೋರಿಸಲು ಶುರುಮಾಡಿರುವ ತಾಲಿಬಾನ್ ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕಗೆ ಗುಡುವು ನೀಡಿದೆ. ಇದಿಷ್ಟೇ ಅಲ್ಲದ್ದೇ, ಅಫ್ಘಾನಿಸ್ತಾನ ದಲ್ಲಿ ಅರಾಜಕತೆ ಸೃಷ್ಟಿಸಿ, ನೂರಾರು ಅಮಾಯಕರನ್ನು ಸಾಯಿಸುತ್ತಿದ್ದಾರೆ.

 

ಇನ್ನು ಈ ಹಿಂದೆ ತಮ್ಮ ವಿರುದ್ಧ ಕೆಲಸ ಮಾಡಿದ್ದ ಬಹುತೇಕ ಅಧಿಕಾರಿಗಳನ್ನು ಹೇಯವಾಗಿ ಕೊಲ್ಲುವ ದೃಶ್ಯ ಸಾಮಾನ್ಯವಾಗಿದೆ. ತಾಲಿಬಾನಿಗಳ ಈ ಅಪಟಳ ಇನ್ನು ಮುಂದೆ ಕಡಿಮೆಯಾಗಿ, ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸು ತ್ತದೆ ಎನ್ನುವುದು ಕನಸಿನ ಮಾತು. ತಾಲಿಬಾನಿಗಳು ಕೇವಲ ಅಫ್ಘಾನಿಸ್ತಾನವನ್ನು ಮಾತ್ರವಲ್ಲದೇ, ಮುಂದಿನ ದಿನದಲ್ಲಿ ಈ ದೇಶವನ್ನಿಟ್ಟುಕೊಂಡು ನೆರೆ ದೇಶಗಳು, ಅಮೆರಿಕ ಹಾಗೂ ಭಾರತದ ಮೇಲೆ ದಾಳಿ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕು ವಂತಿಲ್ಲ. ಆದ್ದರಿಂದ ಎಲ್ಲ ರಾಷ್ಟ್ರಗಳು ಈಗಲೇ ಒಂದಾಗಿ ಈಗಲೇ ಈ ಉಪಟಳವನ್ನು ಮಟ್ಟಹಾಕುವ ಕೆಲಸವನ್ನು ಮಾಡಬೇಕು.

 

ಇಲ್ಲದಿದ್ದರೆ, ಮುಂದಿನ ಕೆಲವೇ ದಿನದಲ್ಲಿ ಮತ್ತೊಮ್ಮೆ ವಿಶ್ವಕ್ಕೆ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ. ಆದ್ದರಿಂದ ತಟಸ್ಥ ನೀತಿ ಅನುಸರಿಸುವ ದೇಶಗಳು, ತಮ್ಮ ನಿಲುವನ್ನು ಸ್ಪಷ್ಟಪಡಿಸುವುದರೊಂದಿಗೆ, ಉಗ್ರಗಾಮಿಗಳನ್ನು ಮಟ್ಟ ಹಾಕುವುದಕ್ಕೆ ಅಗತ್ಯ ಕ್ರಮವಹಿಸಬೇಕು.


Spread the love

About Laxminews 24x7

Check Also

ಶಾಸಕಿ ಜಿ. ಕರೆಮ್ಮಾ ನಾಯಕ್​ ಕಾರು ಅಪಘಾತ

Spread the love ರಾಯಚೂರು: ದೇವದುರ್ಗ ಶಾಸಕಿ ಜಿ. ಕರೆಮ್ಮಾ ನಾಯಕ್​ ತೆರಳುತ್ತಿದ್ದ ಕಾರು ಅಪಘಾತವಾಗಿದ್ದು, ಶಾಸಕಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ