Breaking News

4 ವರ್ಷಗಳ ಬಳಿಕ ಮಾಜಿ ರೌಡಿ ಶೀಟರ್ಸ್​​ ಅಗ್ನಿ ಶ್ರೀಧರ್​​, ಬಚ್ಚನ್​​ಗೆ ವಾರ್ನಿಂಗ್​​ ಕೊಟ್ಟ ಪೊಲೀಸರು​?

Spread the love

ಬೆಂಗಳೂರು: ​ನಾಲ್ಕು ವರ್ಷಗಳ ಬಳಿಕ ಪತ್ರಕರ್ತ ಮತ್ತು ಮಾಜಿ ರೌಡಿ ಶೀಟರ್ ಅಗ್ನಿ ಶ್ರೀಧರ್​​ ಅವರಿಗೆ ಬೆಂಗಳೂರು ಪೊಲೀಸರು ವಾರ್ನಿಂಗ್​​ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಯಾವ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಡಿಸಿಪಿ ಹರೀಶ್​​ ಪಾಂಡೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ಕರೆಸಿ ವಾರ್ನ್​​ ಮಾಡಿದ್ದಾರೆ. ಅಲ್ಲದೇ CRPC 110 ಅಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದಾರೆ.

ಅಗ್ನಿ ಶ್ರೀಧರ್​​​, ಬಚ್ಚನ್​​ ಸೇರಿದಂತೆ 100ಕ್ಕೂ ಹೆಚ್ಚು ರೌಡಿ ಶೀಟರ್​​​ಗಳಿಗೆ ವಾರ್ನಿಂಗ್​​ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಬೆಂಗಳೂರು ಸೌತ್​​ನಲ್ಲಿ ಇನ್ನೂ ಕ್ರೈಮ್​​ನಲ್ಲಿ ಭಾಗಿಯಾಗುತ್ತಿರುವ ಮತ್ತು ಹಳೆಯ ಪ್ರಕರಣಗಳಲ್ಲಿ ಆರೋಪಿಗಳಾದ ರೌಡಿ ಶೀಟರ್ಸ್​​ಗೆ ವಾರ್ನಿಂಗ್​​ ನೀಡಲಾಗಿದೆ.

ಇನ್ನು, ಒಂದು ಲಕ್ಷದಿಂದ ಹತ್ತು ಲಕ್ಷದವರೆಗೂ ಬಾಂಡ್ ಬರೆಸಿಕೊಂಡ ಬೆಂಗಳೂರು ಸೌತ್​​ ಪೊಲೀಸರು, ಯಾವುದಾರೂ ಕ್ರೈಂನಲ್ಲಿ ಭಾಗಿಯಾದರೆ ಬಂಧಿಸಲಾಗುವುದು. ಭಾರೀ ಮೊತ್ತದ ದಂಡದ ಜತೆಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಯಾವ ಯಾವ ಗ್ಯಾಂಗ್ಸ್​ಗೆ ವಾರ್ನಿಂಗ್​​

ಇನ್ನು, ಸೈಲೆಂಟ್ ಸುನೀಲ್ ಗ್ಯಾಂಗ್​​, ಸೈಕಲ್ ರವಿ ಗ್ಯಾಂಗ್, ಮೃತ ರೌಡಿಶೀಟರ್ ಕಾರದ ಪುಡಿ ಅರಸಯ್ಯ ಗ್ಯಾಂಗ್​​, ಕುಳ್ಳು ರಿಜ್ವಾನ್ & ಬೇಕರಿ ರಘು ಗ್ಯಾಂಗ್ ಮತ್ತು ಬನಶಂಕರಿ ಸ್ಟಾಂಡ್ ಕುಟ್ಟಿ & ಪಳನಿ ಗ್ಯಾಂಗ್​​ಗೆ ವಾರ್ನಿಂಗ್​​ ನೀಡಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ಶೃಂಗೇರಿ ವಿದ್ಯಾಶಂಕರ ದೇವಾಲಯಕ್ಕೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರ ಭೇಟಿ,

Spread the love ಶೃಂಗೇರಿ ವಿದ್ಯಾಶಂಕರ ದೇವಾಲಯಕ್ಕೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರ ಭೇಟಿ, ಜನ ಸಾಮಾನ್ಯರಂತೆ ಪ್ರಸಾದ್ ಸ್ವೀಕರಿಸಿದ್ರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ