Breaking News

ಹಬ್ಬದ ಖರೀದಿಯಲ್ಲಿ ಕೊರೋನಾ ಬಗ್ಗೆ ಮೈಮರೆತ ಜನ : ಕೆಆರ್ ಮಾರುಕಟ್ಟೆಯಲ್ಲಿ ಜನವೋ ಜನ

Spread the love

ಬೆಂಗಳೂರು : ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮಗಳೊಂದಿಗೆ ಹಬ್ಬಗಳನ್ನು ಆಚರಿಸೋದಕ್ಕೆ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಅಲ್ಲದೇ ಬಿಬಿಎಂಪಿ ಕೂಡ ಮಾರುಕಟ್ಟೆಯಲ್ಲಿ ಹಬ್ಬಗಳ ಖರೀದಿ ಸಂದರ್ಭದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಖರೀದಿಸಬೇಕು ಎನ್ನುವ ಬಗ್ಗೆಯೂ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಹೀಗಿದ್ದೂ.. ಇಂದು ಹಬ್ಬದ ದಿನದಂದು ಮಾತ್ರ, ಕೊರೋನಾಗೆ ಡೋಂಟ್ ಕೇರ್ ಎಂದಂತ ಜನರು, ಕೆ ಆರ್ ಮಾರುಕಟ್ಟೆ ಸೇರಿದಂತೆ ನಗರ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿಗಾಗಿ ಜನರು ಮುಗಿ ಬಿದ್ದಿದ್ದಾರೆ.

 

ಹೌದು.. ಹಬ್ಬದ ದಿನದಂದು ನಗರ ಪ್ರಮುಖ ದೇವಾಲಯಗಳಲ್ಲಿ ಜನಸಾಗರವೇ ತುಂಬಿದ್ದರೇ, ಮಾರುಕಟ್ಟೆಗಳಲ್ಲಿ ಜನ ಜಂಗುಳಿಯೇ ನೆರೆದಿದೆ. ಕೆ ಆರ್ ಮಾರುಕಟ್ಟೆಯಲ್ಲಂತೂ ಕೊರೋನಾ ಮರೆತಂತ ಜನರು, ಭರ್ಜರಿ ಖರೀದಿಯಲ್ಲಿ ತೊಡಗಿರೋದು ಕಂಡು ಬಂದಿದೆ.

 

ಅಂದಹಾಗೇ ಮಾರುಕಟ್ಟೆಗಳಲ್ಲಿ ಕೊರೋನಾ ಸಂದರ್ಭದಲ್ಲಿ ಅನುಸರಿಸಬೇಕಾದಂತ ಮಾರ್ಗಸೂಚಿ ಕ್ರಮಗಳನ್ನು ಬಿಬಿಎಂಪಿ ಕಮೀಷನರ್ ಬಿಡುಗಡೆ ಮಾಡಿದ್ದಾರೆ. ಆದ್ರೇ.. ಇಂತಹ ಆದೇಶಕ್ಕೂ ಕ್ಯಾರೆ ಎನ್ನದಂತ ಜನರು, ಗುಂಪು ಗುಂಪಾಗಿ ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ.

 

ಬಿಬಿಎಂಪಿ ಅಧಿಕಾರಿಗಳು ಹಾಗೂ ಮಾರ್ಷಲ್ ಗಳು ಸ್ಥಳದಲ್ಲಿದ್ದು ಕೊರೋನಾ ನಿಯಮಾವಳಿಗಳನ್ನು ಅನುಸರಿಸುವಂತೆ ಸಾರಿ ಸಾರಿ ಹೇಳಿದ್ರೂ.. ಜನರು ಮಾತ್ರ ಯಾರ ಮಾತಿಗೂ ಕೇರ್ ಮಾಡದೇ ಖರೀದಿಗಾಗಿ ಮುಗಿ ಬಿದ್ದಿದ್ದು ಕಂಡು ಬಂದಿದೆ. ಇದಲ್ಲದೇ ನಗರದ ಬನಶಂಕರಿ ದೇವಾಲಯದಲ್ಲಿ ಭಕ್ತರ ದಂಡೇ ನೆರೆದು, ದೇವರ ದರ್ಶನದಲ್ಲಿ ಕೊರೋನಾ ನಿಯಮ ಅನುಸರಿಸದೇ ಇರೋದು ಕೂಡ ಕಂಡು ಬಂದಿದೆ


Spread the love

About Laxminews 24x7

Check Also

ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ

Spread the love ಉಗಾರದಲ್ಲಿ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ ಹತ್ಯೆ ಹಿನ್ನೆಲೆ – ಗ್ರಾಮಸ್ಥರ ಉಗ್ರ ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ