ಬೆಂಗಳೂರು: ಮಾರುತಿ ಓಮ್ನಿ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಒಂಟಿ ಸಲಗ ದಾಳಿಯಿಂದ ಒಬ್ಬನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕುಂದೂರು ಗ್ರಾಮದ ಬಳಿ ಒಂಟಿ ಸಲಗ ದಾಳಿ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಒಂಟಿ ಸಲಗ ಪುಂಡಾಟಿಕೆ ಮೆರೆದಿದೆ. ವಿರೂಪಾಕ್ಷ ಎಂಬುವರ ಮನೆಯ ಸಮೀಪ ಕಾಂಪೌಂಡ್ ಬಳಿ ಬಂದವರನ್ನು ಅಟ್ಟಾಡಿಸಿದೆ. ಅತ್ತಿಂದಿತ್ತ ಓಡಾಡುತ್ತ ಕಾಂಪೌಂಡ್ ಒಳಗೆ ನುಗ್ಗಲು ಯತ್ನ ನಡೆಸಿ ಕಾಳುಮೆಣಸಿನ ಬಳ್ಳಿ ಕಿತ್ತುಹಾಕಿದೆ.
Laxmi News 24×7