Breaking News

ಬಿಜೆಪಿ ಸೇರುವಂತೆ ನನಗೂ ಕರೆ ಬಂದಿತ್ತು’: ಸ್ಫೋಟಕ ಹೇಳಿಕೆ ಕೊಟ್ಟ ಕೈ ಶಾಸಕ

Spread the love

ಬಳ್ಳಾರಿ: ನಾನೇನಾದ್ರೂ ಬಿಜೆಪಿಗೆ ಹೋಗಿದ್ರೇ ಈಗ ನಾನು ಮಂತ್ರಿಯಾಗ್ತಿದ್ದೇ, ಬಿಜೆಪಿ ಸರ್ಕಾರ ರಚನೆ ಸಂದ​ರ್ಭ​ದಲ್ಲಿ ನನಗೂ ಬಿಜೆಪಿ ಪಕ್ಷ​ದಿಂದ ಕರೆ ಬಂದಿತ್ತು. ಎಂದು ಹಗರಿಬೊಮ್ಮನಹಳ್ಳಿ ಕಾಂಗ್ರೆಸ್​ಶಾಸಕ ಎಸ್‌. ಭೀಮಾ​ನಾಯ್ಕ್ ಹೇಳಿ​ದ್ದಾ​ರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ನನಗೂ ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷ ಸೇರುವಂತೆ ಕರೆ ಬಂದಿತ್ತು, ಆದರೆ ನಾನು ಮಾಜಿ ಸಿಎಂ ಸಿದ್ದರಾಮಯ್ಯನವರ ಮುಖ ನೋಡ್ಕೊಂಡು ಬಿಜೆಪಿಗೆ ಹೋಗಲಿಲ್ಲ ಎಂದಿದ್ದಾರೆ.

2013- 2018ರ ವರೆಗೆ ಜೆಡಿಎಸ್ ಶಾಸಕನಾಗಿದ್ರು ಸಿದ್ದರಾಮಯ್ಯ ಕೇಳಿದಷ್ಟು ಅನುದಾನ ಕೊಟ್ಟಿದ್ರು, ನಮ್ಮನ್ನ ಕಾಂಗ್ರೆಸ್ ಗೆ ಕರೆದುಕೊಂಡು ಬಂದಿದ್ದೇ ಸಿದ್ದರಾಮಯ್ಯ. ಹೀಗಾಗಿ ಬೇರೆಯವರು ಹೋದ್ರು ನನಗೆ ಹೋಗೋ ಮನಸ್ಸಾಗಲಿಲ್ಲ. ಈ ಬಗ್ಗೆ ಕುಟುಂಬದ ಸದಸ್ಯರ ಜೊತೆಗೆ ಸಾಕಷ್ಟು ಚರ್ಚೆ ಮಾಡಿ, ಅವರ ನಾಯಕತ್ವವನ್ನು ಬಿಟ್ಟು ಹೋಗಬಾರದೆಂಬ ತೀರ್ಮಾನಕ್ಕೆ ಬಂದಿದ್ದೆ ಎಂದಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ