ಮಂಗಳೂರು, (ಆ.10): ಕೇವಲ 5ನೇ ತರಗತಿ ಕಲಿತ್ತಿದ್ದ 44 ವರ್ಷದ ಮಹಿಳೆ ಇದೀಗ ಎಸ್‌ಎಸ್‌ಎಲ್‌ಸಿ ತೇಗರ್ಡೆಯಾಗಿದ್ದಾಳೆ. ಅಚ್ಚರಿ ಎನ್ನಿಸಿದರೂ ಸತ್ಯ.
ಕೇವಲ ಐದನೇ ತರಗತಿ ವಿದ್ಯಾರ್ಹತೆ ಪಡೆದು ಮಂಗಳೂರು ವಿವಿ ಕಾಲೇಜಿನ ತಾತ್ಕಾಲಿಕ ಅಟೆಂಡರ್ ಆಗಿರುವ ಜಯಶ್ರೀ, ಇದೀಗ ಮೊದಲ ಪ್ರಯತ್ನದಲ್ಲೇ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಲ್ಲದೇ 35 ವರ್ಷಗಳ ಬಳಿಕ ಮತ್ತೆ ವಿದ್ಯಾರ್ಥಿನಿಯಾಗಿ ಗೆದ್ದಿದ್ದಾರೆ.
ಒಂದೇ ಜಿಲ್ಲೆಯ ನಾಲ್ವರಿಗೆ 625ಕ್ಕೆ 625 ಅಂಕ : ಅವರ ಮನದ ಮಾತುಗಳು ಕೇಳಿ
ಈ ನಡುವಿನ ಜೀವನದ ಬಂಡಿ ಕಡುಕಷ್ಟದಲ್ಲಿ ಸವೆದರೂ ಮತ್ತೆ ಮಕ್ಕಳಂತೆ ಪಾಠ ಕಲಿತವರು, ಇದೀಗ 625ಕ್ಕೆ 247 ಅಂಕಗೊಂದಿಗೆ ಪಾಸಾದ ಖುಷಿಯನ್ನೂ ಮಕ್ಕಳಂತೆಯೇ ಸಂಭ್ರಮಿಸಿದ್ದಾರೆ.
Laxmi News 24×7