Breaking News

ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟ: ಶೇಕಡಾ 99.9 ವಿದ್ಯಾರ್ಥಿಗಳು ಪಾಸ್, ಓರ್ವ ಮಾತ್ರ ಫೇಲ್

Spread the love

ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಿದರು.

ಜುಲೈ 19 ಮತ್ತು 22ರಂದು ನಡೆದಿದ್ದ ಎಸ್ ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಹಾಜರಾಗಿದ್ದ 8,71,443 ವಿದ್ಯಾರ್ಥಿಗಳಲ್ಲಿ ಒಂದು ವಿದ್ಯಾರ್ಥಿ ಹೊರತುಪಡಿಸಿ ಉಳಿದೆಲ್ಲರೂ ತೇರ್ಗಡೆಯಾಗಿದ್ದಾರೆ. ಆತ ತನ್ನ ಬದಲು ಬೇರೆಯವರಿಂದ ಪರೀಕ್ಷೆ ಬರೆಸಿದ್ದ. ಹೀಗಾಗಿ ಆತನನ್ನು ಅನುತ್ತೀರ್ಣ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೋವಿಡ್ ಕಾರಣದಿಂದ ಈ ಬಾರಿ ವಿಶಿಷ್ಟ ರೀತಿಯಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ನಡೆಸಲಾಗಿತ್ತು. ಮೂರು ವಿಷಯಗಳನ್ನೊಳಗೊಂಡ ಒಂದು ಪತ್ರಿಕೆಯಂತೆ ಒಟ್ಟು ಎರಡು ದಿನ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆದಿರುವ ಎಲ್ಲರನ್ನೂ ಉತ್ತೀರ್ಣಗೊಳಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಅಂಕ ಆಧಾರಿತ ಫಲಿತಾಂಶ ಇಂದು ಪ್ರಕಟವಾಗಿದೆ. ಈ ಬಾರಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

91-100 ಮಾರ್ಕ್ಸ್ = A+ ಗ್ರೇಡ್, 81-90 ಮಾರ್ಕ್ಸ್ = A ಗ್ರೇಡ್, 71-80 ಮಾರ್ಕ್ಸ್ = B+ ಗ್ರೇಡ್, 61-60 ಮಾರ್ಕ್ಸ್ = B ಗ್ರೇಡ್, 51-60 ಮಾರ್ಕ್ಸ್= C+ ಗ್ರೇಡ್, 35-50 ಮಾರ್ಕ್ಸ್ = C ಗ್ರೇಡ್ ನಂತೆ ಫಲಿತಾಂಶ ನೀಡಲಾಗಿದೆ.

ಫಲಿತಾಂಶದಲ್ಲಿ ಎ + ಶ್ರೇಣಿಯಲ್ಲಿ 1,28,93(ಶೇ.16.25) ವಿದ್ಯಾರ್ಥಿಗಳು, ಎ ಶ್ರೇಣಿಯಲ್ಲಿ 250317 (32%) ವಿದ್ಯಾರ್ಥಿಗಳು, ಬಿ ಶ್ರೇಣಿಯಲ್ಲಿ 287684 (ಶೇ.36.86) ವಿದ್ಯಾರ್ಥಿಗಳು, ಸಿ ಶ್ರೇಣಿಯಲ್ಲಿ 113610 (ಶೇ.14.55) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

626ಕ್ಕೆ 625 ಅಂಕವನ್ನು 157 ವಿದ್ಯಾರ್ಥಿಗಳು ಪಡೆದಿದ್ದಾರೆ. 625ಕ್ಕೆ 623 ಅಂಕವನ್ನು 289 ವಿದ್ಯಾರ್ಥಿಗಳು ಪಡೆದಿದ್ದಾರೆ. ಶೇ.9 ರಷ್ಟು ಮಕ್ಕಳನ್ನು ಗ್ರೇಸ್ ಮಾರ್ಕ್ ನೀಡಿ ಪಾಸ್ ಮಾಡಲಾಗಿದೆ. 13 ವಿದ್ಯಾರ್ಥಿಗಳಿಗೆ ಗರಿಷ್ಠ 28 ಗ್ರೇಸ್ ಮಾರ್ಕ್ ನೀಡಲಾಗಿದೆ.


Spread the love

About Laxminews 24x7

Check Also

ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು

Spread the love ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು ನಿಜ ಸುದ್ದಿಗಾಗಿ ಹೋರಾಟ ನಡೆಸುವ ಸಂದರ್ಭ ಬಂದಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ