Breaking News

9 ರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ

Spread the love

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮನುಕುಲವೇ ತಲೆ ತಗ್ಗಿಸುವಂತಿದೆ. ದುಷ್ಕರ್ಮಿಗಳು 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿ, ಬಳಿಕ ಬಲವಂತವಾಗಿ ಸುಟ್ಟು ಹಾಕಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಜೊತೆಗೆ ಆಕೆ ವಿದ್ಯುತ್​ ಶಾಕ್​ನಿಂದ ಸಾವನ್ನಪ್ಪಿದ್ದಾಳೆ ಎಂದು ಆರೋಪಿಗಳು ಬಾಲಕಿಯ ಪೋಷಕರಿಗೆ ಹೇಳಿದ್ದಾರೆ. ಇಷ್ಟೇ ಅಲ್ಲದೇ, ಪೊಲೀಸರಿಗೆ ಈ ವಿಷಯ ತಿಳಿಸದಂತೆಯೂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಪೈಶಾಚಿಕ ಕೃತ್ಯ ದೆಹಲಿ ಕಂಟೋನ್ಮೆಂಟ್​ ಏರಿಯಾದ ನಂಗಲ್ ಗ್ರಾಮದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಬಾಲಕಿ ಭಾನುವಾರ ಸಂಜೆ 5.30 ಕ್ಕೆ ಸಮೀಪದ ಸ್ಮಶಾನದಲ್ಲಿರುವ ವಾಟರ್ ಕೂಲರ್​ನಿಂದ ತಣ್ಣೀರು ತರಲು ಹೋಗಿದ್ದಳು ಆದರೆ ಬಾಲಕಿ ಮನೆಗೆ ವಾಪಸ್ ಬರಲಿಲ್ಲ. ಸುಮಾರು 6 ಗಂಟೆ ಸಮಯದಲ್ಲಿ ಸ್ಮಶಾನದ ಅರ್ಚಕ ರಾಧೆ ಶ್ಯಾಮ್​ ಹಾಗೂ ಮತ್ತಿಬ್ಬರು ವ್ಯಕ್ತಿಗಳು ಬಾಲಕಿಯ ತಾಯಿಯನ್ನು ಕರೆದು ರುದ್ರಭೂಮಿಯಲ್ಲಿ ಬಿದ್ದಿದ್ದ ಅಪ್ರಾಪ್ತೆಯ ಶವವನ್ನು ತೋರಿಸಿದರು. ಜೊತೆಗೆ ವಾಟರ್​ ಕೂಲರ್​​ನಿಂದ ಕುಡಿಯುವ ನೀರನ್ನು ತೆಗೆದುಕೊಳ್ಳುವಾಗ ಕರೆಂಟ್​ ಶಾಕ್ ಹೊಡೆದು ಸಾವನ್ನಪ್ಪಿದ್ದಾಳೆ ಎಂದು ಹೇಳಿದರು.

ಅರ್ಚಕ ಹಾಗೂ ಅಲ್ಲೇ ಇದ್ದ ಇನ್ನಿಬ್ಬರು ವ್ಯಕ್ತಿಗಳು ಪೊಲೀಸರಿಗೆ ಕರೆ ಮಾಡದಂತೆ ಬಾಲಕಿಯ ತಾಯಿಗೆ ಹೇಳಿದ್ದಾರೆ. ಒಂದು ವೇಳೆ ನೀವೇನಾದರೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರೆ, ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಆಗ ಬಾಲಕಿಯ ಅಂಗಾಂಗಗಳನ್ನು ಕದಿಯುತ್ತಾರೆ ಎಂದು ತಾಯಿಗೆ ಹೆದರಿಸಿದ್ದಾರೆ. ನಂತರ ತಾಯಿಯ ಸಮ್ಮುಖದಲ್ಲೇ ಶರೀರವನ್ನು ಸುಟ್ಟು ಹಾಕಿದ್ದಾರೆ. ನನ್ನ ಮಗಳ ದೇಹದ ಮೇಲೆ ಗಾಯದ ಕಲೆಗಳಿದ್ದವು. ಆಕೆಯ ಮೊಣಕೈ, ಮಣಿಕಟ್ಟಿನ ಮೇಲೆ ಗಾಯಗಳಾಗಿದ್ದವು. ಜೊತೆಗೆ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದ್ದವು ಎಂದು ಬಾಲಕಿಯ ತಾಯಿ ಹೇಳಿದ್ದಾರೆ.

ನಂತರ ಬಾಲಕಿಯ ತಾಯಿ ತನ್ನ ಗಂಡನಿಗೆ ವಿಷಯ ತಿಳಿಸಿದ್ದಾಳೆ. ನಂತರ ಸುಮಾರು 200 ಮಂದಿ ಗ್ರಾಮಸ್ಥರ ಜತೆ ಸ್ಮಶಾನಕ್ಕೆ ಬಂದಿದ್ದಾರೆ. ಅವರ ಪ್ರತಿಭಟನೆಯ ನಂತರ ಪೋಲೀಸರು ಅರ್ಚಕ ನನ್ನು ಬಂಧಿಸಿದ್ದಾರೆ. ಎಫ್​ಎಸ್​ಎಲ್​​ ಮತ್ತು ಕ್ರೈಂ ಬ್ರಾಂಚ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ