ಬೆಂಗಳೂರು: ನೀವು ನಿಮ್ಮ ಬೈಕ್ನ್ನ ಮನೆ ಹೊರಗಡೆ ನಿಲ್ಲಿಸ್ತಿದ್ದೀರಾ..? ಹಾಗಾದ್ರೆ ಹುಷಾರ್ ಆಗಿರಿ. ಮನೆ ಮುಂದೆ ನಿಲ್ಲಿಸಿದ ಬೈಕ್ಗಳನ್ನು ಕ್ಷಣಮಾತ್ರದಲ್ಲಿ ದರೋಡೆ ಮಾಡುವ ಚಾಲಾಕಿ ಗ್ಯಾಂಗ್ ಒಂದು ಈಗ ನಗರದಲ್ಲಿ ಸಕ್ರಿಯವಾಗಿದೆ.
ವೀರಣ್ಣ ಪಾಳ್ಯದಲ್ಲಿ ವ್ಯಕ್ತಿಯೊಬ್ಬರು ತಮ್ಮ ಬೈಕ್ನ್ನು ಮನೆಯ ಹೊರಗೆ ನಿಲ್ಲಿಸಿ ತಮ್ಮ ಅಪಾರ್ಟ್ಮೆಂಟ್ಗೆ ಹೋಗಿ ಬರೋದ್ರೊಳಗಾಗಿ ನಿಲ್ಲಿಸಿದ ಬೈಕ್ ನಾಪತ್ತೆಯಾಗಿದೆ. ಒಳಗಡೆ ಹೋಗಿ ಬರೋದ್ರೊಳಗಾಗಿ ಬೈಕ್ ಕಾಣದ್ದನ್ನ ಕಂಡು ಮಾಲೀಕ ಅರೆ ಕ್ಷಣ ಗಲಿಬಿಲಿಗೊಂಡಿದ್ದಾನೆ.
ತದನಂತರ ಸಿಸಿಟಿವಿ ಯ ದೃಶ್ಯಗಳನ್ನು ನೋಡಿದಾಗ ಕ್ಷಣಮಾತ್ರದಲ್ಲಿ ಖತರ್ನಾಕ್ ಖದೀಮರು ಬೈಕ್ ಎಗರಿಸಿದ ಪರಿಗೆ ಅಚ್ಚರಿಗೊಂಡಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಸಮೇತ ಗೋವಿಂದಪುರ ಪೊಲೀಸ್ ಠಾಣೆಗೆ ದೌಡಾಯಿಸಿದ ಬೈಕ್ ಮಾಲೀಕ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.
Laxmi News 24×7