Breaking News

ಅವಮಾನ ಮಾಡಿ ಬಿಎಸ್ ವೈ ರಾಜೀನಾಮೆ ಪಡೆಯಲಾಗಿದೆ; ಸತೀಶ್ ಜಾರಕಿಹೊಳಿ

Spread the love

ಬೆಳಗಾವಿ: ಬಿಜೆಪಿ ನಾಯಕರು ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸವಣ್ಣನವರ ರೀತಿ ಬಿಎಸ್ ವೈ ಅವರನ್ನು ಕೆಳಗಿಳಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯಡಿಯೂರಪ್ಪನವರನ್ನು ಇಷ್ಟೊಂದು ಅವಮಾನಗೊಳಿಸಬಾರದಿತ್ತು. ಹಿರಿಯ ನಾಯಕನಿಗೆ ಗೌರವಯುತವಗೈ ಹೋಗಲು ಅವಕಾಶ ನೀಡಬೇಕಿತ್ತು. ಒತ್ತಡ ಹೇರಿ ಹಿರಿಯ ನಾಯಕನನ್ನು ಅಗೌರವದಿಂದ ಕೆಳಗಿಳಿಸಿದ್ದಾರೆ. ಇದನ್ನು ಯಾರೂ ಸಹಿಸಲು ಆಗಲ್ಲ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರ ವಿರುದ್ಧ ನಡೆದ ಪಿತೂರಿ ಇಂದು ಬಿಎಸ್ ವೈ ವಿರುದ್ಧವೂ ನಡೆದಿದೆ. ಅಂದು ಬಸವಣ್ನನವರನ್ನು ಮನುವಾದಿಗಳು ಕೆಳಗಿಳಿಸಿದ್ದರು. ಇಂದು ಓರ್ವ ಜನ ನಾಯಕನನ್ನು ಅದೇ ರೀತಿ ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಅಂದು ಮನುವಾದಿಗಳು ಯಶ್ವಿಯಾದರು ಇಂದೂ ಕೂಡ ಮನುವಾದಿಗಳು ಯಶ್ವಿಯಾದಂತಿದೆ. ಯಡಿಯೂರಪ್ಪ ಮನುವಾದಿಗಳ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ

 


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ