Breaking News

ಮಹಿಳೆಯೊಂದಿಗೆ ಪೋನ್‌ ನಲ್ಲಿ ಅಶ್ಲೀಲ ಸಂಭಾಷಣೆ ; ಮಹಿಳೆಯರಿಂದ ಪಾಲಿಕೆ ನೌಕರನಿಗೆ ಗೂಸ

Spread the love

ಮೈಸೂರು: ಕಚೇರಿಗೆ ಕೆಲಸಕ್ಕಾಗಿ ಬಂದಿದ್ದ ಮಹಿಳೆಯೊಬ್ಬರ ಫೋನ್‌ ನಂಬರ್‌ ಪಡೆದು ಕಾಮಾಸಕ್ತಿಯಿಂದ ಮಹಿಳೆಯೊಂದಿಗೆ ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದ ಪಾಲಿಕೆಯ ನೌಕರನೊಬ್ಬನು ಮಹಿಳೆಯರಿಂದಲೇ ಹೊಡೆತ ತಿಂದಿರುವ ಘಟನೆ ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಯಲ್ಲಿ ನಡೆದಿದೆ. ಈ ಸಂಬಂಧ ನೌಕರನ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಘಟನೆಯ ವೈರಲ್‌ ವಿಡಿಯೋಸರ್ಕಾರಿ ಸಿಬ್ಬಂದಿಯಾಗಿ ಸಾರ್ವಜನಿಕರ ಜೊತೆ ಸೌಜನ್ಯ ಮತ್ತು ಉತ್ತಮ ನಡತೆ ಮರೆತ ದ್ವಿತೀಯ ದರ್ಜೆ ಸಹಾಯಕ ವಿಷಕಂಠ ಮಹಿಳೆಯರ ಕೈಯಲ್ಲಿ ಪೆಟ್ಟು ತಿಂದಿದ್ದಾನೆ.

ಘಟನೆಯ ಮತ್ತಷ್ಟು ವಿವರ..ಆಶ್ರಯ ಮನೆಗೆ ಅರ್ಜಿ ಸಲ್ಲಿಸಲು ವಾಸ ದೃಢೀಕರಣ ಪತ್ರ ನೀಡುವಂತೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ವಿಷಕಂಠ ಮಹಿಳೆಗೆ ಪೋನ್ ಮಾಡಿ ಕೆಟ್ಟದ್ದಾಗಿ ಮಾತನಾಡಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಮಹಿಳೆ‌, ಇತರ ಮಹಿಳೆಯರನ್ನು ‌ಕರೆದುಕೊಂಡು ಶಾರದಾದೇವಿ ನಗರದ ಪಾಲಿಕೆಯ ವಲಯ ಕಚೇರಿಗೆ ಬಂದಿದ್ದಾರೆ. ಈ ವೇಳೆ ನೌಕರನನ್ನು ತರಾಟೆಗೆ ತೆಗೆದುಕೊಂಡು, ಗೂಸಾ ನೀಡಿದ್ದಾರೆ. ಈ ಸಂಬಂಧ ಮಹಿಳೆ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅನುಚಿತವಾಗಿ ವರ್ತಿಸಿದ ನೌಕರನನ್ನು ಅಮಾನತು ಮಾಡುವಂತೆ ಪಾಲಿಕೆಯ ಆಯುಕ್ತರು ಡಿ.ಸಿ.ಗೆ ಶಿಫಾರಸು ಮಾಡಿದ್ದಾರೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ