ವಿಜಯಪುರ: ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರರಾದ ಬಿ.ವೈ ವಿಜಯೇಂದ್ರ, ರಾಘವೇಂದ್ರ ದೆಹಲಿ ಭೇಟಿ ವಿಚಾರದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ದೆಹಲಿಗೆ ಹೋಗಿ 2000 ಕೋಟಿ ಕೊಡುತ್ತೇವೆ ನಮ್ಮನ್ನು ಸಿಎಂ ಮಾಡಿ ಎಂದಿದ್ದಾರೆ ಎಂದು ಹೊಸ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ಎಲ್ಲಾ ಸಮುದಾಯದವರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ದಲಿತರು, ಹಿಂದುಳಿದವರು, ಮಹಿಳೆಯರು ಹೀಗೆ ಎಲ್ಲರಿಗೂ ಅವಕಾಶ ನೀಡಿದ್ದಾರೆ. ಹೀಗಿರುವಾಗ ಯಾರೋ 2000 ಕೋಟಿ ಕೊಡುತ್ತೇವೆ ಸಿಎಂ ಮಾಡಿ ಎಂದರೆ ಕಪಾಳಕ್ಕೆ ಬಾರಿಸಿ ಕಳಿಸ್ತಾರೆ ಎಂದು ತಿಳಿಸಿದರು.