Breaking News

ಸಂಚಾರಿ ವಿಜಯ್‌ ಜನ್ಮದಿನ ಇಂದು- ಅಭಿಮಾನಿಗಳಿಂದ ಸ್ಮರಣೆ

Spread the love

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ದಿವಂಗತ ಸಂಚಾರಿ ವಿಜಯ್‌ ಅವರ ಜನ್ಮದಿನ ಇಂದು. ಅವರ ಅಭಿಮಾನಿಗಳು, ಗೆಳೆಯರು ಸಾಮಾಜಿಕ ಜಾಲತಾಣಗಳ ಮುಖಾಂತರ ವಿಜಯ್‌ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

ಜೂನ್‌ 12ರ ರಾತ್ರಿ ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಜಯ್‌ ಜೂನ್‌ 15ರಂದು ಮೃತಪಟ್ಟಿದ್ದರು. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ವಿಜಯ್‌, ಅವರ ಏಳು ಅಂಗಾಂಗಳನ್ನು ದಾನ ಮಾಡಲಾಗಿತ್ತು. ನಟರಾದ ನೆನಪಿರಲಿ ಪ್ರೇಮ್‌, ಲೂಸ್‌ಮಾದ ಯೋಗೇಶ್ ತಮ್ಮ ಗೆಳೆಯನನ್ನು ಸ್ಮರಿಸಿದ್ದಾರೆ.

ಐದು ಭಾಷೆಯಲ್ಲಿ ತಯಾರಾಗುತ್ತಿರುವ ಸಂಚಾರಿ ವಿಜಯ್‌ ಅವರ ಬಹುನಿರೀಕ್ಷಿತಾ ‘ಪಿರಂಗಿಪುರ’ ಚಿತ್ರದ, ಮೊದಲ ಪಾತ್ರ ಪರಿಚಯದ ಒಂದು ವಿಡಿಯೊ ಮತ್ತು ಪೋಸ್ಟರ್ ಬಿಡುಗಡೆ ಜೊತೆ ‘ಸೈಲೆಂಟ್ ಸ್ಟಾರ್’ ಎಂಬ ಬಿರುದನ್ನು ನೀಡಲು ಚಿತ್ರತಂಡ ನಿರ್ಧರಿಸಿದೆ. ಪ್ರಿಸ್ವಿಸ್ ಸ್ಟುಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಇಂದು ಸಂಜೆ 6ಕ್ಕೆ ವಿಡಿಯೊ ಅನಾವರಣಗೊಳ್ಳಲಿದೆ.

‘ಪಿರಂಗಿಪುರ’ ಚಿತ್ರದಲ್ಲಿ ಸಂಚಾರಿ ವಿಜಯ್ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಿತ್ರದ ಶೇ30 ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿತ್ತು. ಈ ನಡುವೆ ವಿಜಯ್‌ ಆಕಸ್ಮಿಕವಾಗಿ ವಿಧಿವಶರಾದರು’ ಎಂದು ನಿರ್ದೇಶಕ ಜನಾರ್ದನ್ ರೆಡ್ಡಿ ಹೇಳಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ