Home / ರಾಜಕೀಯ / ರಾಜ್ಯದಲ್ಲಿ ಮುಂದಿನ ವಾರ ಮತ್ತೊಂದು ಸುತ್ತಿನ ಅನ್​ಲಾಕ್​: ನೈಟ್​ ಕರ್ಫ್ಯೂನಿಂದ ವಿನಾಯ್ತಿ, ಪಬ್​ಗಳು ಪುನಾರಂಭ ಸಾಧ್ಯತೆ

ರಾಜ್ಯದಲ್ಲಿ ಮುಂದಿನ ವಾರ ಮತ್ತೊಂದು ಸುತ್ತಿನ ಅನ್​ಲಾಕ್​: ನೈಟ್​ ಕರ್ಫ್ಯೂನಿಂದ ವಿನಾಯ್ತಿ, ಪಬ್​ಗಳು ಪುನಾರಂಭ ಸಾಧ್ಯತೆ

Spread the love

ಕೊರೊನಾ ಪ್ರಕರಣಗಳಲ್ಲಿ ನಿರಂತರ ಇಳಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್​ಲಾಕ್​ 4.0 ಜಾರಿಗೆ ಚಿಂತನೆ ನಡೆಸಿದೆ. ಜುಲೈ 19ರಿಂದ ಅನ್​ಲಾಕ್​ 4.0 ಜಾರಿಗೆ ಬರಲಿದ್ದು ಈ ಮೂಲಕ ಸದ್ಯ ಚಾಲ್ತಿಯಲ್ಲಿರುವ ನೈಟ್​ ಕರ್ಫ್ಯೂಗೂ ಸರ್ಕಾರ ಇತಿಶ್ರೀ ಹೇಳುವ ಸಾಧ್ಯತೆ ಇದೆ.

ಅನ್​ಲಾಕ್​​ 3.0ದಲ್ಲಿ ರಾಜ್ಯ ಸರ್ಕಾರ ವೀಕೆಂಡ್​ ಕರ್ಫ್ಯೂವನ್ನ ತೆರವುಗೊಳಿಸಿತ್ತು. ಹೀಗಾಗಿ ಸದ್ಯ ಜಾರಿಯಲ್ಲಿರುವ ನೈಟ್​ ಕರ್ಫ್ಯೂ ಕೂಡ ಮುಂದಿನ ವಾರದಿಂದ ತೆರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕ ಅನ್​ಲಾಕ್​ 3.0 ಅಡಿಯಲ್ಲಿ ಈಗಾಗಲೇ ರಾಜ್ಯದಲ್ಲಿ ಮಾಲ್​, ರೆಸ್ಟೋರೆಂಟ್​, ಹೋಟೆಲ್​, ಕಂಪನಿ ಹಾಗೂ ದೇವಸ್ಥಾನಗಳನ್ನ ತೆರೆಯಲಾಗಿದೆ. ಇದೀಗ ಅನ್​ಲಾಕ್​ 4.0ನ ಅಡಿಯಲ್ಲಿ ಪಬ್​ಗಳೂ ಸಹ ಪುನಾರಂಭಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

 

ಲಾಕ್​ಡೌನ್​ 3.0 ಸಮಯದಲ್ಲಿ ಮಾಲ್​ಗಳ ಪುನಾರಂಭಕ್ಕೆ ಸಿಎಂ ಯಡಿಯೂರಪ್ಪ ಅವಕಾಶ ನೀಡಿದ್ದರೂ ಸಹ ಚಿತ್ರ ಮಂದಿರಗಳನ್ನ ತೆರವು ಮಾಡಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿಯ ಅನ್​ಲಾಕ್​​ನಲ್ಲಿ ಸೀಮಿತ ಸಂಖ್ಯೆಯ ಪ್ರೇಕ್ಷಕರೊಂದಿಗೆ ಚಿತ್ರ ಮಂದಿರವನ್ನ ಆರಂಭ ಮಾಡ್ತಾರಾ ಎಂಬ ಕುತೂಹಲ ಕೂಡ ಇದೆ.

ಅತಿಯಾದ ಜನದಟ್ಟಣೆಯನ್ನ ಗಮನಿಸಿದ ಬಳಿಕ ಬೆಂಗಳೂರು ಹೊರವಲಯದಲ್ಲಿರುವ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೊರಡಿಸಿರುವ ಆದೇಶದ ಪ್ರಕಾರ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.


Spread the love

About Laxminews 24x7

Check Also

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ