Breaking News

ರೈತರಿಗೆ ಗುಡ್ ನ್ಯೂಸ್: ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Spread the love

ಧಾರವಾಡ: ತೋಟಗಾರಿಕೆ ಇಲಾಖೆಯಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‍ಹೆಚ್‍ಎಂ) ಯೋಜನೆಯಡಿಯಲ್ಲಿ ರೈತರಿಗೆ ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 27 ಕೊನೆಯ ದಿನವಾಗಿದೆ.

ಸಣ್ಣ ನರ್ಸರಿ ಸ್ಥಾಪನೆ, ಹಣ್ಣು(ಬಾಳೆ), ಹೂ(ಗುಲಾಬಿ, ಬಿಡಿ ಸೇವಂತಿಗೆ, ಚೆಂಡು ಹೂ), ತರಕಾರಿಗಳ ಹೊಸ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣಾ ಘಟಕಗಳು, ಸಂರಕ್ಷಿತ ಬೇಸಾಯದಡಿ (ಹಸಿರುಮನೆ, ನೆರಳುಪರದೆ, ಪ್ಲಾಸ್ಟಿಕ್ ಮಲ್ಚಿಂಗ್), ಯಾಂತ್ರೀಕರಣ ಘಟಕದಡಿ 20 (ಪಿಟಿಓಹೆಚ್‍ಪಿ) ಸಾಮರ್ಥ್ಯಕ್ಕಿಂತ ಕಡಿಮೆಯ ಟ್ರ್ಯಾಕ್ಟರ್, ಕೊಯ್ಲೋತ್ತರ ನಿರ್ವಹಣೆ ಅಡಿ ಪ್ಯಾಕ್‍ಹೌಸ್, ಹಣ್ಣು ಮಾಗಿಸುವ ಘಟಕ, ಈರುಳ್ಳಿ ಶೇಖರಣಾ ಘಟಕ ಮತ್ತು ತೋಟಗಾರಿಕಾ ಉತ್ಪನ್ನಗಳ ಮಾರುಕಟ್ಟೆಗಾಗಿ ತಳ್ಳುವ ಗಾಡಿಗಳ ಸೌಲಭ್ಯಗಳಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2744376 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.


Spread the love

About Laxminews 24x7

Check Also

ಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ

Spread the loveಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ ಜುಲೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ