Breaking News

ಜೈಲು ಸಿಬ್ಬಂದಿಗೆ ಖಾರದ ಪುಡಿ ಎರಚಿ 7 ಕೈದಿಗಳು ಎಸ್ಕೇಪ್​: ಮೊದಲೇ ತಯಾರಾಗಿತ್ತು ಭಯಾನಕ ಸಂಚು!

Spread the love

ಜೈಲು ಸಿಬ್ಬಂದಿಗೆ ಖಾರದ ಪುಡಿ ಕೈದಿಗಳು ಜೈಲಿನಿಂದ ಪರಾರಿಯಾಗಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ. ಈ ವೇಳೆ ಸಿಬ್ಬಂದಿಯ ಮೇಲೆ ಹಲ್ಲೆ ಸಹ ಮಾಡಿದ್ದು, ಸುಮಾರು 5 ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಈ ಘಟನೆ ಈಸ್ಟ್​ ಸಯಾಂಗ್ ಜಿಲ್ಲೆಯಲ್ಲಿ ನಡೆದಿರುವುದಾಗಿ ಸೋಮವಾರ ವರದಿಯಾಗಿದೆ. ಜೈಲಿಂನಿಂದ ಎಸ್ಕೇಪ್​ ಆಗಲು 7 ಕೈದಿಗಳು ಮೊದಲೇ ಸಂಚು ರೂಪಿಸಿದ್ದರು. ಕೈದಿಗಳನ್ನು ಅಭಿಜಿತ್​ ಗೊಗಯ್​, ತಾರೋ ಹಮಾಮ್​, ಕಲೋಮ್​ ಅಪಾಂಗ್​, ತಲುಮ್​ ಪ್ಯಾನ್​ಯಿಂಗ್​. ಸುಬಾಶ್​ ಮೊಂಡಲ್​, ರಾಜಾ ತಾಯೆಂಗ್​ ಮತ್ತು ಡನಿ ಗಾಮಲಿನಾ ಎಂದು ಗುರುತಿಸಲಾಗಿದೆ. ತಮ್ಮ ಸೆಲ್​ನಲ್ಲಿದ್ದ ಸೇರಿಸಿಕೊಂಡಿದ್ದ ಉಪ್ಪು ಮತ್ತು ಖಾರದ ಪುಡಿಯನ್ನು ಎರಚಿ ಹಲ್ಲೆ ಮಾರಿ ಜೈಲಿನಿಂದ ಎಸ್ಕೇಪ್​ ಆಗಿದ್ದಾರೆ.

ಈ ಘಟನೆ ಭಾನುವಾರ ರಾತ್ರಿ 6.30ರ ಸುಮಾರಿಗೆ ನಡೆದಿದೆ. ಊಟಕ್ಕೆಂದು ಸೆಲ್​ಗಳನ್ನು ತೆರೆಯಲಾಗಿತ್ತು. ಎಸ್ಕೇಪ್​ ಆಗಲು ಸಂಚು ರೂಪಿಸಿದ್ದ ಏಳು ಮಂದಿಯು ಕೂಡ ಒಂದೇ ಕಡೆ ಸೇರಿದ್ದರು. ತಮ್ಮ ಯೋಜನೆಯಂತೆಯೇ ಜೈಲು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಐವರು ಜೈಲು ಸಿಬ್ಬಂದಿಗೆ ಗಾಯಗಳಾಗಿವೆ. ಐವರಲ್ಲಿ ಒಬ್ಬರ ತಲೆಗೆ ಪೆಟ್ಟು ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಸೆಲ್​ನ ಭಾರದ ಲಾಕ್​ನಿಂದ ತಲೆಗೆ ಹೊಡೆದಿರುವ ಸಾಧ್ಯತೆ ಇದೆ. ಎಂದು ಇನ್ಸ್‌ಪೆಕ್ಟರ್ ಜನರಲ್ ಆಫ್​ ಪೊಲೀಸ್ (ಕಾನೂನು ಮತ್ತು ಸುವ್ಯವಸ್ಥೆ) ಚುಖು ಅಪಾ ತಿಳಿಸಿದ್ದಾರೆ. ಕೈದಿಗಳು ಹಿರಿಯ ಅಧಿಕಾರಿಗಳ ಮೊಬೈಲ್​ ಫೋನ್​ ಅನ್ನು ಸಹ ದೋಚಿದ್ದಾರೆಂದು ತಿಳಿದುಬಂದಿದೆ. ಇದೀಗ ಎಸ್ಕೇಪ್​ ಆಗಿರುವ ಕೈದಿಗಳನ್ನು ಮತ್ತೆ ಸೆರೆಹಿಡಿಯಲು ವಿಶೇಷ ಪೊಲೀಸ್​ ತಂಡವನ್ನು ರಚಿಸಿ, ಕಾರ್ಯಾಚರಣೆಗೆ ಇಳಿಯಲಾಗಿದೆ.

ಸಾಂಕ್ರಾಮಿಕ ರೋಗದಿಂದಾಗಿ ಮಧ್ಯಾಹ್ನ 3 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರುವುದರಿಂದ ತಪ್ಪಿಸಿಕೊಳ್ಳುವ ಕೈದಿಗಳು ಈ ಪರಿಸ್ಥಿತಿಯಲ್ಲಿ ಹೆಚ್ಚು ದೂರ ಹೋಗುವುದು ಕಷ್ಟ ಎಂದು ಪಾಸಿಘಾಟ್ ಉಪ ಪೊಲೀಸ್ ವರಿಷ್ಠಾಧಿಕಾರಿ ತಪಾಂಗ್ ಟಾಟಕ್ ಹೇಳಿದ್ದಾರೆ


Spread the love

About Laxminews 24x7

Check Also

ಜಾತಿ ನಿಂದನೆ ಆರೋಪದಡಿ ವಕೀಲ ಕೆ.ಎನ್​​​. ಜಗದೀಶ್​​​​ ಬಂಧನ

Spread the love ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಬಿಗ್​ಬಾಸ್​​​ ಮಾಜಿ ಸ್ಪರ್ಧಿ, ವಕೀಲ ಕೆ.ಎನ್​. ಜಗದೀಶ್​​ ಅವರನ್ನು ಕೊಡಿಗೆಹಳ್ಳಿ ಠಾಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ