Breaking News

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಇಂಧನ ಬೆಲೆ ಏರಿಕೆ ಹಿನ್ನಲೆ ಇಂದಿನಿಂದ ಬಸ್ ಪ್ರಯಾಣ ದರ ಪರಿಷ್ಕರಣೆ

Spread the love

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಇಂಧನ ಬೆಲೆ ದಿನನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗಕ್ಕೆ ಸಂಬಂಧಿಸಿದಂತೆ ದಾವಣಗೆರೆ-ಚನ್ನಗಿರಿ, ದಾವಣಗೆರೆ-ಹೊಸದುರ್ಗ, ದಾವಣಗೆರೆ-ಜಗಳೂರು, ದಾವಣಗೆರೆ-ಹರಪನಹಳ್ಳಿ ಮಾರ್ಗವಾಗಿ ಪ್ರಯಾಣಿಸುವ ಬಸ್‍ಗಳ ಪ್ರಯಾಣ ದರವನ್ನು ಜು.5 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ.

ಅದರಂತೆ ದಾವಣಗೆರೆಯಿಂದ ಚನ್ನಗಿರಿಗೆ 65 ರೂ., ಹೊಸದುರ್ಗ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಗೆ 80 ರೂ. ಹಾಗೂ ವೇಗದೂತ ಸಾರಿಗೆಗೆ 90 ರೂ., ಜಗಳೂರಿಗೆ 55 ರೂ., ಹರಪನಹಳ್ಳಿಗೆ 50 ರೂ.ಗಳ ಪ್ರಯಾಣ ದರವನ್ನು ನಿಗಧಿಪಡಿಸಿದ್ದು, ಸಾರ್ವಜನಿಕರು ಎಂದಿನಂತೆ ಸಹಕರಿಸಬೇಕೆಂದು ಕರಾರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮುನಿಯಪ್ಪ

Spread the loveಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ