Breaking News

ರಫೇಲ್‌ ಬಗ್ಗೆ ತನಿಖೆಗೆ ಮೋದಿ ಸರ್ಕಾರ ಸಿದ್ದವೇಕಿಲ್ಲ: ರಾಹುಲ್‌ ಪ್ರಶ್ನೆ

Spread the love

ನವದೆಹಲಿ, ಜು.04: ಸದಾ ಕೇಂದ್ರ ಸರ್ಕಾರದ ವಿರುದ್ದ ಟ್ವಿಟ್ಟರ್‌ ಮೂಲಕ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮತ್ತೆ ರಫೇಲ್‌ ಒಪ್ಪಂದದ ಬಗ್ಗೆ ಜೆಪಿಸಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನಿಖೆಗೆ ಏಕೆ ಸಿದ್ಧವಾಗಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಪೋಲ್‌ ಮೂಲಕ ಸಮೀಕ್ಷೆ ನಡೆಸಿದ್ದಾರೆ.

ಭಾರತದೊಂದಿಗಿನ 59,000 ಕೋಟಿ ರೂ. ರಫೇಲ್‌ ಫೈಟರ್ ಜೆಟ್ ಒಪ್ಪಂದದಲ್ಲಿ ಭ್ರಷ್ಟಾಚಾರ ಮಾಡಲಾಗಿದೆ ಹಾಗೂ ಭಾರತದ ಕಡೆ ಹೆಚ್ಚು ಒಲವು ತೋರಲಾಗಿದೆ ಎಂಬ ಆರೋಪದ ಬಗ್ಗೆ ಹೆಚ್ಚು ಸೂಕ್ಷ್ಮ ನ್ಯಾಯಾಂಗ ತನಿಖೆ ನಡೆಸಲು ಫ್ರಾನ್ಸ್ ನ್ಯಾಯಾಧೀಶರನ್ನು ನೇಮಿಸಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕ ಈ ಹೇಳಿಕೆ ನೀಡಿದ್ದಾರೆ.

 

ತನಿಖೆಯು ಸತ್ಯವನ್ನು ಕಂಡುಕೊಳ್ಳುವ ಏಕೈಕ ಮಾರ್ಗವಾಗಿದೆ ಎಂದು ಹೇಳಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ತನಿಖೆಗೆ ಆದೇಶಿಸಲು ಮತ್ತು ಒಪ್ಪಂದದ ವಿಚಾರದಲ್ಲಿ ಪಾರದರ್ಶಕವಾಗಿರಲು ಹೇಳಿದೆ.

ಶನಿವಾರ ವಯನಾಡು ಸಂಸದ ರಾಹುಲ್‌ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಯನ್ನು ಅಪಹಾಸ್ಯ ಮಾಡಿದ ಕಾರ್ಟೂನ್ ಹಂಚಿಕೊಂಡಿದ್ದಾರೆ.

ಇನ್ನು ಈ ರಫೇಲ್‌ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಅಮಿತ್ ಮಾಲ್ವಿಯಾ, ರಫೇಲ್‌ ವಿಷಯದ ಮೇಲೆ 2024 ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಕಾಂಗ್ರೆಸ್‌ನ ಮಾಜಿ ನಾಯಕ ರಾಹುಲ್‌ಗೆ ಸವಾಲೆಸೆದಿದ್ದಾರೆ.

 

“ರಾಹುಲ್ ಗಾಂಧಿ ಈಗ ಈ ಹಂತಕ್ಕೆ ಇಳಿದಿದ್ದಾರೆ. ಭಾರತದಾದ್ಯಂತ ಜನರು ರಾಹುಲ್‌ನ್ನು ತಿರಸ್ಕರಿಸಿದ್ದಾರೆ. ಆದರೆ ಈ ವಿಷಯದ ಮೇಲೆ 2024 ಚುನಾವಣೆಯಲ್ಲಿ ಹೋರಾಡಲು ರಾಹುಲ್‌ಗೆ ಸ್ವಾಗತ,” ಎಂದು ಮಾಲ್ವಿಯಾ ಹೇಳಿದರು.

ಫ್ರಾನ್ಸ್ ತನಿಖೆ ಆರಂಭಿಸಿದ ನಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ರಫೇಲ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು. “ಮೂರು ವಿಷಯಗಳು ಸುದೀರ್ಘ ಮರೆಯಾಗುವುದಿಲ್ಲ. ಸೂರ್ಯ, ಚಂದ್ರ, ಮತ್ತು ಸತ್ಯ. ರಫೇಲ್ ಒಪ್ಪಂದದ ಭ್ರಷ್ಟಾಚಾರವು ಈಗ ಸ್ಪಷ್ಟವಾಗಿ ಹೊರಬಂದಿದೆ. ಫ್ರೆಂಚ್ ಸರ್ಕಾರವು ತನಿಖೆಗೆ ಆದೇಶಿಸಿದ ನಂತರ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ನಿಲುವು ಇಂದು ಸಮರ್ಥಿಸಲ್ಪಟ್ಟಿದೆ,” ಎಂದಿದ್ದಾರೆ.

ಇನ್ನು ತನ್ನ ಟ್ವಿಟ್ಟರ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನಿಖೆಗೆ ಏಕೆ ಸಿದ್ಧವಾಗಿಲ್ಲ ಎಂದು ಪ್ರಶ್ನಿಸಿ ಸಮೀಕ್ಷೆಯ ಪೋಲ್‌ ಆರಂಭಿಸಿರುವ ರಾಹುಲ್‌ ಗಾಂಧಿ, ಅದರಲ್ಲಿ ನಾಲ್ಕು ಆಯ್ಕೆಗಳನ್ನು ನೀಡಿದ್ದಾರೆ. ಮೊದಲನೆಯದು ತಪ್ಪಿತಸ್ಥ ಮನಸ್ಸಾಕ್ಷಿ, ಎರಡನೇಯದ್ದು ಮಿತ್ರರನ್ನೂ ರಕ್ಷಿಸಲು, ತನಿಖೆಗೆ ರಾಜ್ಯ ಸಭಾ ಸೀಟು ಬೇಕಾಗಿಲ್ಲ, ಇವೆಲ್ಲವೂ ಸರಿಯಾದ ಉತ್ತರ ಎಂದು ಹಿಂದಿಯಲ್ಲಿ ಉಲ್ಲೇಖಿಸಿದ್ದಾರೆ.

 


Spread the love

About Laxminews 24x7

Check Also

ಸರ್ಕಾರಿ ವೈದ್ಯರು, ನರ್ಸ್​ಗಳಿಗೆ ಗ್ರಾಮೀಣ ಸೇವೆ ಕಡ್ಡಾಯ

Spread the loveಬೆಂಗಳೂರು: ನಗರ ಪ್ರದೇಶಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್​ಗಳು ಸೇರಿದಂತೆ ಇತರ ಸಿಬ್ಬಂದಿ ಇನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ