Breaking News

ಸರ್ಕಾರಿ ಹೊಸ ಮಾಧ್ಯಮಿಕ ಶಾಲೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಕೆ ಎಂ ಎಫ್ ನಿರ್ದೇಶಕರು ಅಮರನಾಥ ಜಾರಕಿಹೊಳಿ….

Spread the love

ಗೋಕಾಕ ಜು 4 : ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಯತ್ನದಿಂದ ಇಲ್ಲಿನ ಸರಕಾರಿ ಹೊಸ ಮಾಧ್ಯಮಿಕ ಶಾಲೆಗೆ ಆರ್ ಐ ಡಿ ಎಫ್ ಯೋಜನೆಯಡಿ 62.80 ಲಕ್ಷ ರೂ, ನ್ಯಾಯಾಂಗ ಇಲಾಖೆ ವತಿಯಿಂದ 15 ಲಕ್ಷ ರೂ ಹಾಗೂ ಕೆ ಆರ್ ಡಿ ಸಿ ಯೋಜನೆಯಡಿ 30 ಲಕ್ಷ ರೂ ಒಟ್ಟು ರೂ 1.7 ಕೋಟಿ ವೆಚ್ಚದಲ್ಲಿ ಮಂಜೂರಾದ 7 ಶಾಲಾ ಕೊಠಡಿ, 6 ಶೌಚಾಲಯಗಳಿಗೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಪ್ರಾಥಮಿಕ ಶಾಲೆಗಳಿಗೆ 57 ಕೊಠಡಿ 6.94 ಕೋಟಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಿಂದ 6 ಕೊಠಡಿಗಳಿಗೆ ರೂ 75. 50 ಲಕ್ಷ ಒಟ್ಟು 7.70 ಕೋಟಿ ವೆಚ್ಚದಲ್ಲಿ ಮಂಜೂರಾದ ಶಾಲಾ ಕೊಠಡಗಳಿಗೆ ರವಿವಾರದಂದು ಕೆ ಎಮ್ ಎಪ್  ನಿರ್ದೇಶಕ ಅರಮನಾಥ ಜಾರಕಿಹೊಳಿ ಅವರು ನಗರದ ಸರಕಾರಿ ಹೊಸ ಮಾಧ್ಯಮಿಕ ಶಾಲಾ ಆವರಣದಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಅಮರನಾಥ ಜಾರಕಿಹೊಳಿ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿದೆ‌. ಸಿಎಂ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಗುಣಾತ್ಮಕ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದೆ. ಆ ನಿಟ್ಟಿನಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಗೋಕಾಕ ಶೈಕ್ಷಣಿಕವಾಗಿ ವಲಯವೂ ಸಹ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಎಲ್ಲಾ ಮಕ್ಕಳನ್ನು ಶಾಲಾ ಶಿಕ್ಷಣದ ವ್ಯಾಪ್ತಿಯಲ್ಲಿ ತರುವ ಮೂಲಕ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ ಆ ದಿಸೆಯಲ್ಲಿ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕಲ್ಲದೆ ಪಾಲಕರು ಸಹ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದರು.

 

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಚಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಇಒ ಜಿ.ಬಿ.ಬಳಗಾರ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಸಂತೋಷ ಮಂತ್ರಣ್ಣವರ,ಯೂಸುಫ್ ಅಂಕಲಗಿ, ಹುನಮಂತ ಕಾಳಮ್ಮನಗುಡಿ, ಹರೀಶ ಬೂದಿಹಾಳ, ಶಿವಪ್ಪ ಗುಡ್ಡಾಕಾರ, ಜ್ಯೋತಿಬಾ ಸುಭಂಜಿ, ಮುಖಂಡರುಗಳಾದ ದುರ್ಗಪ್ಪ ಶಾಸ್ತ್ರೀಗೊಲ್ಲರ, ವಿಜಯ ಜತ್ತಿ, ಬಸವರಾಜ ದೇಶನೂರ, ವಿಶ್ವನಾಥ ಬಿಳ್ಳೂರ, ಅಬ್ದುಲಸತ್ತಾರ ಶಾಬಾಶಖಾನ, ದಾದಾಫಿರ್ ಶಾಭಾಶಖಾನ, ಡಾ. ಅಬ್ದುಲವಹಾಬ ಜಮಾದಾರ, ರಿಯಾಜ್ ಖತೀಬ, ಯಲ್ಲಪ್ಪ ಹಳ್ಳೂರ, ಶ್ರೀಶೈಲ ಪೂಜಾರಿ, ಶಿವಾನಂದ ಹತ್ತಿ, ಸುರೇಶ ಜೋರಾಪೂರ, ಧರೀಶ ಕಲಘಾಣ, ಮಲ್ಲಿಕಾರ್ಜುನ ಹೊಸಪೇಟ, ಬಸವರಾಜ ಶೇಗುಣಸಿ, ದೇವಾನಂದ ಕಂಬಾರ,ದರ್ಶನ ತುರಾಯಿದಾರ, ಮಂಜುನಾಥ ತುರಾಯಿದಾರ, ಪಿಡಬ್ಯೂಡಿ ಅಭಿಯಂತರ ನಾಗಾಭರಣ , ಕೆಆರ್.ಡಿ. ಸಿ ವ್ಯವಸ್ಥಾಪಕ ಪರಮೇಶ್ವರಪ್ಪ ಶಿರಹಟ್ಟಿ, ಮುಖ್ಯೋಪಾಧ್ಯಾಯ ಜಿ.ಆರ್. ಮಾಳಗಿ, ಶಿಕ್ಷಕರುಗಳಾದ ಎನ್.ಕೆ ತೋರನಗಟ್ಟಿ, ಬಿ.ಎಸ್.ಜೋರಾಪೂರ, ಎಸ್.ಜಿ.ಮುಚ್ಚಂಡಿಹಿರೇಮಠ, ಶ್ರೀಮತಿ ಗೀತಾ ಕಲ್ಲನಗೌಡರ, ಶ್ರೀಮತಿ ಜಯಶ್ರೀ ಶೆಟ್ಟರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು


Spread the love

About Laxminews 24x7

Check Also

ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೇಸ್ತೀನ್ ಧ್ವಜ

Spread the love ಬೆಳಗಾವಿ: ಚಿಕ್ಕೋಡಿ ಪಟ್ಟಣದಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಪ್ಯಾಲಿಸ್ತೀನ್ ಧ್ವಜ ಹಾರಾಡಿದ್ದು, ಕೂಡಲೇ ಪೊಲೀಸರು ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ