ಕೊಲೊಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಕೋಚ್ ರಾಹುಲ್ ದ್ರಾವಿಡ್ ಕ್ವಾರಂಟೈನ್ ಮುಗಿದ ಬೆನ್ನಲ್ಲೇ ತರಬೇತಿ ಶುರು ಮಾಡಿದ್ದಾರೆ.
ಲಂಕಾದಲ್ಲಿ ಕಾಲಿಟ್ಟ ಶಿಖರ್ ಧವನ್ ನೇತೃತ್ವದ ಕ್ರಿಕೆಟಿಗರು ಮೂರು ದಿನಗಳ ಕಾಲ ನಿಯಮದಂತೆ ಕ್ವಾರಂಟೈನ್ ಗೊಳಗಾಗಿದ್ದರು. ಅದಾದ ಬಳಿಕ ತಡಮಾಡದೇ ದ್ರಾವಿಡ್ ತಮ್ಮ ಹುಡುಗರೊಂದಿಗೆ ಅಂಗಣಕ್ಕಿಳದಿದ್ದಾರೆ.
ಜುಲೈ 13 ರಿಂದ ಸರಣಿ ಆರಂಭವಾಗಲಿದ್ದು, ಒಂದು ವಾರ ಮೊದಲೇ ದ್ರಾವಿಡ್ ದೈಹಿಕ ವ್ಯಾಯಾಮ ಮಾಡಿಸಿ ಯುವ ಕ್ರಿಕೆಟಿಗರನ್ನು ಸಿದ್ಧಗೊಳಿಸಿದ್ದಾರೆ. ಇನ್ನು, ದ್ರಾವಿಡ್ ಹುಡುಗರಿಗೆ ತರಬೇತಿ ನೀಡುತ್ತಿರುವ ಫೋಟೋಗಳನ್ನು ನೋಡುತ್ತಿದ್ದಂತೇ ನೆಟ್ಟಿಗರು ಕೋಚ್ ಎಂದರೆ ಹೀಗಿರಬೇಕು ಎಂದು ಹೊಗಳಿದ್ದಾರೆ.
Laxmi News 24×7