ಬೆಂಗಳೂರು: ಶಾಲೆಗಳನ್ನು ಪುನರಾರಂಭಿಸಬೇಕು ಎಂದು ರಾಜ್ಯ ಸರಕಾರದ ಮೇಲೆ ಒತ್ತಡ ಇದೆ. ಇದರ ನಡುವೆ ರಾಜ್ಯದ ಶೇ. 75ರಷ್ಟು ವಿದ್ಯಾರ್ಥಿಗಳ ಹೆತ್ತವರ ಬಳಿ ಮೊಬೈಲ್ ಇದ್ದರೂ ಶೇ. 49 ಮಂದಿ ಬಳಿ ಮಾತ್ರ ಇಂಟರ್‌ನೆಟ್ ಸೌಲಭ್ಯ ಹೊಂದಿದ್ದಾರೆ. ಶಿಕ್ಷಣ ಇಲಾಖೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ.
ಮಕ್ಕಳ ಶಾಲಾ ದಾಖಲಾತಿ ಸಂದರ್ಭ ದಲ್ಲಿ ಮೊಬೈಲ್ ಫೋನ್ ಹೊಂದಿರುವ ಮತ್ತು ಹೊಂದಿರದ ಹೆತ್ತವರು, ಸ್ಮಾರ್ಟ್ ಫೋನ್ ಮತ್ತು ಸಾಮಾನ್ಯ ಫೋನ್ ಹೊಂದಿರುವ ಹೆತ್ತವರು, ಇಂಟರ್‌ನೆಟ್ ಹೊಂದಿರು ವವರು, ಜಿ-ಮೇಲ್ ಹೊಂದಿರು ವವರು, ಟಿವಿ, ರೇಡಿಯೋ ಹೊಂದಿರು ವವರ ಜಿಲ್ಲಾವಾರು ಮಾಹಿತಿ ಯನ್ನು ಸಂಗ್ರಹಿಸಲಾಗಿದೆ.
ಈ ಮಾಹಿತಿ ಪ್ರಕಾರ ಮನೆಯಲ್ಲಿ ಟಿ.ವಿ., ಮೊಬೈಲ್ ಇರುವ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಟಿ.ವಿ., ರೇಡಿಯೋ ಇಲ್ಲದೆ ಸಾಮಾನ್ಯ ಮೊಬೈಲ್ ಮಾತ್ರ ಹೊಂದಿರುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಟಿ.ವಿ. ಮಾತ್ರ ಇರು ಮಕ್ಕಳು ಇದ್ದಾರೆ. ಇಂಟರ್‌ನೆಟ್ ಸೌಲಭ್ಯ ಇಲ್ಲದಿರುವ ಮಕ್ಕಳಲ್ಲಿ ಗ್ರಾಮೀಣ ಭಾಗವದರೇ ಹೆಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರ ಮತ್ತು ಪಟ್ಟಣದ ಖಾಸಗಿ ಶಾಲೆಗಳ ಬಹುತೇಕ ವಿದ್ಯಾರ್ಥಿಗಳಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಅವಶ್ಯವಿರುವ ಸ್ಮಾರ್ಟ್‌ಫೋನ್ ಲಭ್ಯವಿದೆ. ಆದರೆ ಗ್ರಾಮೀಣ ಭಾಗದ ಅನೇಕ ಮಕ್ಕಳಲ್ಲಿ ಇಲ್ಲ. ಈ ಮಾಹಿತಿ ಆಧಾರದಲ್ಲಿ ಶೈಕ್ಷಣಿಕ ಚಟುವಟಿಕೆ ರೂಪಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.