ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿರುವ ಸೋಂಕಿನ ತೀವ್ರತೆ ಕಡಿಮೆಯಾಗುವ ಮೊದಲೇ ಕರಿ ಮಾರಿ ಬ್ಲ್ಯಾಕ್ ಫಂಗಸ್ ತನ್ನ ಕರಾಳತೆಯನ್ನು ತೋರುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ 10 ಮಂದಿ ಫಂಗಸ್ನಿಂದ ಸಂಪೂರ್ಣ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 46 ಜನರಿಗೆ ದೃಷ್ಟಿ ದೋಷ ಕಂಡು ಬಂದಿತ್ತು. ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡು ಬರುತ್ತಿದ್ದು, ಹಲವರಿಗೆ ಮೂಗಿನ ಮೂಲಕವೂ ಬ್ಲ್ಯಾಕ್ ಹಬ್ಬಿ, ಕಣ್ಣಿನ ನರಗಳಿಗೆ ಸಮಸ್ಯೆ ಉಂಟು ಮಾಡುತ್ತಿದ್ದು, ಕಣ್ಣಿನ ತೊಂದರೆಯಾದವರ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಕಿಮ್ಸ್ ವೈದ್ಯರು ಹೊರತೆಗೆದಿದ್ದಾರೆ.