Breaking News

ಜಿಲ್ಲಾ ಪಂಚಾಯತಿ‌ ಮಾಜಿ ಉಪಾಧ್ಯಕ್ಷೆಇಂದು ಮುಂಜಾನೆ ತೀರಿಕೊಂಡರು.

Spread the love

ಬೆಳಗಾವಿ: ಜಿಲ್ಲಾ ಪಂಚಾಯತಿ‌ ಮಾಜಿ ಉಪಾಧ್ಯಕ್ಷೆ ಹಾಗೂ ಚಿಕ್ಕೋಡಿ ಜಿಲ್ಲಾ ಕೆಪಿಸಿಸಿ ಮಹಿಳಾ ಮೋರ್ಚಾದ ಅಧ್ಯಕ್ಷೆ ತೇಜಸ್ವಿನಿ ಅರ್ಜುನ ನಾಯಿಕವಾಡಿ (51) ಇಂದು ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ತಮ್ಮ ಮೃದು ಸ್ವಭಾವದದ ವ್ಯಕ್ತಿತ್ವದಿಂದ ಪರಿಚಿತರಾಗಿದ್ದ ರಾಯಬಾಗ ತಾಲೂಕು ಕಂಕಣವಾಡಿ ಮೂಲದವರಾದ ತೇಜಸ್ವಿನಿ ಅವರು, ಕೆಲವು ದಿನಗಳ ಹಿಂದಷ್ಟೆ ಕೋವಿಡ್ ನಿಂದ ಗುಣಮುಖರಾಗಿದ್ದರು. ಆದರೆ ಕಡಿಮೆ ರಕ್ತದೊತ್ತಡದ ಕಾರಣಕ್ಕೆ ಆಕಸ್ಮಿಕವಾಗಿ ಇಂದು ಮುಂಜಾನೆ ತೀರಿಕೊಂಡರು.

ಇಂದು ಮಧ್ಯಾಹ್ನ ಕಂಕಣವಾಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು 2003-2005 ರ ಕಾಲಾವಧಿಯಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆಯಾಗಿದ್ದರು. ಕಾಂಗ್ರೆಸ್ ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ ನೆರವಾಗುವ ಮೂಲಕ ಔದಾರ್ಯ ಮೆರೆದಿದ್ದರು.

ತೇಜಸ್ವಿನಿ ಅವರ ಸಾವಿಗೆ ಕಾಂಗ್ರೆಸ್ ಪಕ್ಷದ ಹಲವಾರು ಗಣ್ಯರು ಕಂಬನಿ‌ ಮಿಡಿದಿದ್ದಾರೆ


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ