Breaking News

ಕೊರೊನಾ ಮೂರನೇ ಅಪ್ಪಳಿಸುವುದು ಖಚಿತ ಎಂದು ಎಚ್ಚರಿಸಿರುವ ತಜ್ನರು, ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಮಾರ್ಗಸೂಚಿ ಬಿಡುಗಡೆ

Spread the love

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಪ್ಪಳಿಸುವುದು ಖಚಿತ ಎಂದು ಎಚ್ಚರಿಸಿರುವ ತಜ್ನರು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಮೂರನೇ ಅಲೆ ಆರಮ್ಭವಾಗಲಿದ್ದು, ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

* 5 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಪರಿಣಾಮಗಳು ಕಡಿಮೆ. ಆದರೆ 6-11 ವರ್ಷದ ಮಕ್ಕಳು ಮಾಸ್ಕ್ ಧರಿಸುವುದು ಉತ್ತಮ
* 12 ವರ್ಷ ಮೇಲ್ಪಟ್ಟ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
*ರೆಮ್ ಡಿಸಿವಿರ್ ಔಷಧವನ್ನು ಮಕ್ಕಳಿಗೆ ಬಳಸುವಂತಿಲ್ಲ
*ಮಕ್ಕಳಲ್ಲಿ ಕಡಿಮೆ ತೀವ್ರತೆ ಸೋಂಕು ಇದ್ದಾಗ ಸ್ಟಿರಾಯ್ಡ್ ಬಳಸುವಂತಿಲ್ಲ
*ಸಾಧಾರಣವಾದ ಕೊರೊನಾ ಲಕ್ಷಣವಿರುವ ಮಕ್ಕಳಗೆ ಆಕ್ಸಿಜನ್ ಥೆರಪಿ ನೀಡಬೇಕು
*ಪ್ರತಿ ನಾಲ್ಕು ಗಂಟೆಗೊಮ್ಮೆ ಪ್ಯಾರಾಸಿಟಮಲ್ ನೀಡಬೇಕು
*ಮಕ್ಕಳಿಗೆ 6 ನಿಮಿಷಗಳ ವಾಕಿಂಗ್ ಟೆಸ್ಟ್ ಮಾಡಬೇಕು
*ಮಕ್ಕಳಲ್ಲಿ ರಕ್ತದ ಆಕ್ಸಿಜನ್ ಸ್ಯಾಚುರೇಷನ್ ಮಟ್ಟ ಪರೀಕ್ಷಿಸಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಮಕ್ಕಳಿಗೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ