Breaking News

ಪತಿಯನ್ನೇ ಕೊಂದ ಪತ್ನಿ- ಪುತ್ರ, ಪ್ರಿಯತಮನ ಸಾಥ್

Spread the love

ಚಿಕ್ಕೋಡಿ: ಪತ್ನಿಯ ಅನೈತಿಕ ಸಂಭಂಧವನ್ನು ಪತಿ  ಪ್ರಶ್ನಿಸಿದಕ್ಕೆ ಪತ್ನಿ, ಪುತ್ರ ಹಾಗೂ ಆಕೆಯ ಪ್ರಿಯತಮ ಸೇರಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

ಕುಮಾರ ರಾಮು ಖೋತ (39) ಮೃತನಾಗಿದ್ದಾನೆ. ಪತ್ನಿಯಿಂದ ಕೊಲೆಯಾದ ಈತ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ನಿವಾಸಿಯಾಗಿದ್ದನು. ಚಿಂಚಲಿ ಪಟ್ಟಣದ ಬಾಳೇಶ ಶ್ರೀಕಾಂತ ಹಾರೂಗೇರಿ, ಸಚಿನ ಕುಮಾರ ಖೋತ, ಗೀತಾ ಕುಮಾರ ಖೋತ, ಬೆಳಕೂಡ ಗ್ರಾಮದ ಅಪ್ಪಾಸಾಬ ಜಿನ್ನಾಪ್ಪಾ ತಪಕಿರೆ ಹಾಗೂ ಸಂತೋಷ ನೇಮಿನಾಥ ತಪಕಿರೆ ಬಂಧಿತ ಆರೋಪಿಗಳಾಗಿದ್ದಾರೆ.

ಮೃತ ಕುಮಾರ ರಾಮು ಖೋತ ಪತ್ನಿ ಗೀತಾ ಕುಮಾರ ಖೋತ ಕುಡಚಿ ಪೊಲೀಸ ಠಾಣೆಗೆ ಜೂ.02 ರಂದು ಬಂದು ಠಾಣೆಯಲ್ಲಿ ಪತಿಯ ಬಗ್ಗೆ ಪ್ರಕರಣ ದಾಖಲಿಸಿದ್ದಾಳೆ.ನನ್ನ ಪತಿ ಮೇ. 27 ರಂದು ಸಾವನಪ್ಪಿದ್ದು, ನನ್ನ ಪತಿಯನ್ನು ಯಾರೋ ಆರೋಪಿತರು ಯಾವುದೋ ಕಾರಣಕ್ಕಾಗಿ ಯಾವುದೋ ಆಯುಧದಿಂದ ತಲೆಗೆ ಹೊಡೆದು ಭಾರಿ ಗಾಯಪಡಿಸಿ ಕೊಲೆ ಮಾಡಿದ್ದಾರೆ. ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಬಿಳಿಯ ಪ್ಲಾಸ್ಟಿಕನಲ್ಲಿ ಕಟ್ಟಿ ಮೃತದೇಹವನ್ನು ಕೃಷ್ಣಾ ನದಿಯಲ್ಲಿ ಒಗೆದು ಸಾಕ್ಷಿ ನಾಶ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಪೊಲೀಸರ ತನಿಖೆ ವೇಳೇ ಗೀತಾಗೆ ಚಿಂಚಲಿ ಗ್ರಾಮದ ಬಾಳೇಶ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದು, ಇದು ಕುಮಾರ ಖೋತನಿಗೆ ಗೊತ್ತಾಗಿ ಜಗಳ ಮಾಡಿದ್ದನು. ಈ ವೇಳೇ ಗೀತಾ ಪತಿಯ ಮೇಲೆ ಸಿಟ್ಟಾಗಿ ಮೃತನ ಹೆಂಡತಿ, ಮಗ ಸಚಿನ ಮತ್ತು ಬಾಳೇಶ ಹಾರೂಗೇರಿ ಕೂಡಿ ಕೊಲೆ ಸಂಚು ರೂಪಿಸಿ ಜೂ.27 ರಂದು ಕುಮಾರನಿಗೆ ಸಾರಾಯಿ ಕುಡಿಸಿ ಕಲ್ಲಿನಿಂದ ತಲೆಗೆ, ಎದೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೃತನ ಶವವನ್ನು ಮೃತನ ಮಗ ಸಚಿನ್ ಹಾಗೂ ಬಾಳೇಶ ಇಬ್ಬರೂ ತೆಗೆದುಕೊಂಡು ಹೋಗಿ ಸಾಕ್ಷಿ ಹಾಳು ಮಾಡಲು ಚಿಂಚಲಿ ಜಾಕವೆಲ್ ಹತ್ತಿರ ಕೃಷ್ಣಾ ನದಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರ ಬಳಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಕುಡಚಿ ಪೊಲೀಸರು ಐದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು, ಸದ್ಯ ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.


Spread the love

About Laxminews 24x7

Check Also

ಶೀಘ್ರದಲ್ಲಿ ಯಡೂರ ಫ್ರೌಢ ಶಾಲೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ:ಶಾಸಕ ಗಣೇಶ ಹುಕ್ಕೇರಿ

Spread the love ಚಿಕ್ಕೋಡಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೀಘ್ರದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ