Breaking News

ಕೇರಳ ರಾಜ್ಯದ ಪಾಲಾದ KSRTC ಟ್ರೇಡ್‌ ಮಾರ್ಕ್‌! ಬರೀ ಹೆಸರಲ್ಲ, ಎಮೋಷನ್ ಎಂದ ನೆಟ್ಟಿಗರು

Spread the love

ಬೆಂಗಳೂರು, ಜೂನ್ 03: ಏಳು ವರ್ಷಗಳ ಕಾನೂನು ಹೋರಾಟದ ಬಳಿಕ ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಕೇರಳಕ್ಕೆ ಸೇರಿಕೊಂಡಿದೆ. ಕೆಎಸ್‌ಆರ್‌ಟಿಸಿ ಹೆಸರನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಬುಧವಾರ ಆದೇಶ ಹೊರಡಿಸಲಾಗಿದೆ.

ಟ್ರೇಡ್ ಮಾರ್ಕ್‌ ರಿಜಿಸ್ಟರಿ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್‌) ಆಧಾರದ ಮೇಲೆ ತೀರ್ಪು ನೀಡಿದ್ದು, Karnataka State Road Transport Corporation (KSRTC) ವಿಸ್ತೃತ ರೂಪವನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ವಿಟ್ಟರ್‌ನಲ್ಲಿ ಕರ್ನಾಟಕ ಸಾರಿಗೆ ಸಮರ್ಥಿಸಿಕೊಂಡು ನೆಟ್ಟಿಗರು ಹಲವು ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಮುಂದೆ ಓದಿ…

ಕೆಎಸ್‌ಆರ್‌ಟಿಸಿ ಸೇವೆ ಸಮರ್ಥಿಸಿಕೊಂಡು ಟ್ವೀಟ್

ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಕೇರಳ ಪಾಲಾಗಿರುವ ಕುರಿತು ನೂರಾರು ಮಂದಿ ಟ್ವೀಟ್‌ ಮಾಡುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಸೇವೆಯನ್ನು ಸಮರ್ಥಿಸಿಕೊಂಡಿದ್ದಾರೆ. KSRTC ಅನ್ನುವ ಹೆಸರನ್ನು ಕೇರಳದವರು ಗೆದ್ದುಕೊಳ್ಳಬಹುದು ಆದರೆ ಕ.ರಾ.ರ.ಸಾ.ನಿ ಸೇವೆ ಮತ್ತು ಗುಣಮಟ್ಟವನ್ನು ಹಿಂದಿಕ್ಕುವುದು ದಕ್ಷಿಣ ಭಾರತದ ಯಾವ ರಾಜ್ಯದ ಸಾರಿಗೆ ನಿಗಮಕ್ಕೂ ಆಗಲಿಕ್ಕಿಲ್ಲ. ದಕ್ಷಿಣದ 4 ರಾಜ್ಯಗಳ ಸಾರಿಗೆ ಬಳಸಿದ ಅನುಭವದ ಮೇಲೆ ಇದು ನನ್ನ ಅನಿಸಿಕೆ ಎಂದು ವಸಂತ್ ಶೆಟ್ಟಿಯವರು ಟ್ವೀಟ್ ಮಾಡಿದ್ದಾರೆ.

 

 

“KSRTC ಬರೀ ಬಸ್ ಆಗಿರಲಿಲ್ಲ”

 

ಕೇರಳ ಈ ಪ್ರಕರಣವನ್ನು ಗೆದ್ದಿರಬಹುದು. ಆದರೆ ksrtc ನೀಡುವ ಸೇವೆಯನ್ನು ನೀಡಲು ಸಾಧ್ಯವೇ? ಕನ್ನಡ ರಾಜ್ಯ ಸಾರಿಗೆಯ ಹೆಸರು ಬದಲಾಗಬಹುದು ಕೊಡುವ ಗುಣಮಟ್ಟವಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ನನಗೆ ksrtc ಬರೀ ಬಸ್ ಆಗಿರಲಿಲ್ಲ. ಅದು ಸಿಟಿ ಬಸ್/ ಊರ್ ಬಸ್ ಎಂಬ ಭಾವನೆಯಾಗಿತ್ತು ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. KSRTC ಅನ್ನೋದು ಪದವಷ್ಟೇ ಕೆಂಪ್ ಬಸ್ ಅನ್ನುವುದು ಎಮೋಷನ್ ಎಂದು ನಟರಾಜ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಪರ್ಯಾಯ ಪದ ಸಲಹೆ ನೀಡಿದ ನೆಟ್ಟಿಗರು

ಇನ್ನೂ ಕೆಲವರು KSRTC ಪದಕ್ಕೆ ಕರ್ನಾಟಕ ಬೇರೆ ಯಾವ ಪದವನ್ನು ಬಳಸಬಹುದು ಎಂಬ ಕುರಿತು ಟ್ವೀಟ್ ಮಾಡಿದ್ದಾರೆ. KSRTC ಪರ್ಯಾಯ ಏನು ಕರೆಯಬಹುದು ಎಂದು ಯೋಚಿಸಿ ಎಂದು ಕಾವ್ಯಾ ಎಂಬುವರು ಟ್ವೀಟ್ ಮಾಡಿದ್ದಾರೆ. ಹೆಸರು ಬೇರೆಯಾದರೇನಂತೆ, ಇನ್ನೊಂದು ಹೆಸರು ಬಳಸೋಣ. ಸೇವೆಯಲ್ಲಿ ಯಾರಿಗೂ ಕಡಿಮೆಯಾಗದಂತೆ ಮತ್ತೊಂದು ಹೆಸರು ಬರಲಿ ಹಲವರು ಟ್ವೀಟ್ ಮಾಡಿದ್ದಾರೆ.

 

“ಅಧೀಕೃತ ಘೋಷಣೆ ನಂತರ ಕಾನೂನು ಹೋರಾಟದ ನಿರ್ಧಾರ”

 

ಆದರೆ ಈ ಕುರಿತು ಅಧೀಕೃತ ಘೋಷಣೆ ಬಂದಿಲ್ಲ. ಆದೇಶ ಬಂದ ಮೇಲೆ ಕಾನೂನು ಹೋರಾಟದ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದ ಮತ್ತು ಕೇರಳ ರಾಜ್ಯದ ನಡುವೆ KSRTC ವಿಸ್ತೃತ ರೂಪಕ್ಕಾಗಿ ಕಾನೂನು ಹೋರಾಟ ನಡೆಯುತ್ತಿತ್ತು. ಈ ಹೋರಾಟದಿಂದ ಕೇರಳಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಕೆಎಸ್‌ಆರ್‌ಟಿಸಿ ಎಂಬ ಹೆಸರನ್ನು ಕೇರಳ 1962ರಲ್ಲೇ ನೋಂದಣಿ ಮಾಡಿಸಿದೆ. ಕರ್ನಾಟಕ 1972ರಲ್ಲಿ ನೋಂದಣಿ ಮಾಡಿಸಿದ್ದು ಎಂಬ ಅಂಶವನ್ನು ತೀರ್ಪು ನೀಡುವಾಗ ಪರಿಗಣಿಸಲಾಗಿದೆ.


Spread the love

About Laxminews 24x7

Check Also

ಸಂಧ್ಯಾ ಸುರಕ್ಷಾ ಯೋಜನೆಯಿಂದ ಹಿರಿಯ ನಾಗರಿಕರಿಗೆ ಅನುಕೂಲಗಳು ಏನೇನು?

Spread the love ಬೆಂಗಳೂರು: ವಯಸ್ಸಾದ ವೃದ್ಧರಿಗೆ ಮಕ್ಕಳೇ ಆಸರೆ. ಆದರೂ, ಹಿರಿಯ ಜೀವಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಪ್ರತಿಯೊಂದಕ್ಕೂ ಮಕ್ಕಳನ್ನೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ