Breaking News

‘ಎಲ್ಲವನ್ನೂ ಸಿಎಂ ಮಾಡೋದಾದ್ರೆ ಬೆಳಗಾವಿಯ ನಾಲ್ವರು ಸಚಿವರು ಯಾಕೆ?’ – ಸತೀಶ್‌ ಜಾರಕಿಹೊಳಿ

Spread the love

ಬೆಳಗಾವಿ, ಮೇ 31: ”ಎಲ್ಲವನ್ನೂ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರೇ ಮಾಡುವುದಾದರೆ ಜಿಲ್ಲೆಯ ನಾಲ್ವರು ಸಚಿವರು ಯಾಕಾಗಿ ಇದ್ದಾರೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಟೀಕಿಸಿದ್ದಾರೆ.

ಮಂಗಳ ಬಿಮ್ಸ್‌ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಸ್ವತಃ ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುವುದಾಗಿ ಹೇಳಿದ್ದರು. ಈ ವಿಚಾರದಲ್ಲಿ ಜಿಲ್ಲೆಯ ಸಚಿವರುಗಳ ಬಗ್ಗೆ ಲೇವಡಿ ಮಾಡಿರುವ ಸತೀಶ್‌ ಜಾರಕಿಹೊಳಿ, ”ಮುಖ್ಯಮಂತ್ರಿಗಳೇ ಬೆಳಗಾವಿಗೆ ಬರುವುದಾಗಿ ಹೇಳಿದ್ದಾರೆ. ಎಲ್ಲವೂ ಮುಖ್ಯಮಂತ್ರಿಗಳೇ ಮಾಡುವುದಾದರೆ ಜಿಲ್ಲೆಯ ನಾಲ್ವರು ಸಚಿವರು ಯಾಕೆ ಬೇಕು” ಎಂದು ಪ್ರಶ್ನಿಸಿದ್ದಾರೆ.

”ಜಿಲ್ಲೆಯಲ್ಲಿರುವ ಮಂತ್ರಿಗಳು ಬಿಮ್ಸ್‌ಗೆ ತೆರಳಿ ಸಭೆ ನಡೆಸಿ, ಏನು ಸಮಸ್ಯೆ ಎಂಬುವುದನ್ನು ಸರಿಯಾಗಿ ಕಂಡುಕೊಂಡು ಸಮಸ್ಯೆ ಪರಿಹರಿಸಬೇಕು. ಅದನ್ನು ಬಿಟ್ಟು ಎಲ್ಲವೂ ಮುಖ್ಯಮಂತ್ರಿಗಳೇ ಮಾಡುವುದೆಂದರೇ ಎಷ್ಟು ಸರಿ? ಅಷ್ಟಕ್ಕೂ ಎಲ್ಲವೂ ಮುಖ್ಯಮಂತ್ರಿಗಳೇ ಮಾಡಲು ಆಗುವುದಿಲ್ಲ” ಎಂದು ಕೂಡಾ ಹೇಳಿದರು.

ಇನ್ನು ”ಯಾವುದೇ ಸರ್ಕಾರ ಆಡಳಿತ ನಡೆಸುವುದಾದರೂ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಅದೇ ಜಿಲ್ಲೆಯವರು ಆಗಿರಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಉಸ್ತುವಾರಿ ಸಚಿವರು ಅದೇ ಜಿಲ್ಲೆಯವರಾದರೆ ಅವರಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದಿರುತ್ತದೆ. ಹಾಗಾದರೆ ಸಮಸ್ಯೆ ಬಗೆಹರಿಸಲು ಸುಲಭವಾಗುತ್ತದೆ” ಎಂದು ಅಭಿಪ್ರಾಯಿಸಿದರು.

 

ಸುರೇಶ್ ಅಂಗಡಿ ನಿಧನದಿಂದಾಗಿ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯು ಮೇ 2 ರಂದು ನಡೆದಿದ್ದು, ಬಿಜೆಪಿಯ ದಿವಂಗತ ಸುರೇಶ್ ಅಂಗಡಿ ಪತ್ನಿ ಮಂಗಳಾ ಸುರೇಶ್ ಅಂಗಡಿ ಎದುರು ಭಾರೀ ಪೈಪೋಟಿ ನೀಡಿ ಸತೀಶ್‌ ಜಾರಕಿಹೊಳಿ ಪರಾಭವಗೊಂಡಿದ್ದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ

Spread the love ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಬೆಳಗಾವಿಯಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಸಾಹಿತ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ