Breaking News

ತಳ್ಳುವ ಗಾಡಿಯಲ್ಲೇ ಗಂಡನನ್ನ ಕೂರಿಸಿಕೊಂಡು ಮೈಲಿ ದೂರದ ಆಸ್ಪತ್ರೆಗೆ ಕರೆದೊಯ್ದ ಪತ್ನಿ-ಮಗ!

Spread the love

ಗದಗ: ಕರೊನಾ ಲಾಕ್​ಡೌನ್​ ಹಿನ್ನೆಲೆ ಸಾರಿಗೆ ಸೌಲಭ್ಯ ಬಂದ್ ಆಗಿದ್ದು, ​ಮನೆಯಿಂದ ಮೈಲಿ ದೂರದ ಆಸ್ಪತ್ರೆಗೆ ತಳ್ಳುವ ಗಾಡಿಯಲ್ಲೇ ರೋಗಿಯನ್ನ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ವೈರಲ್​ ಆಗಿದೆ.

ಗದಗನ ಸಿದ್ದರಾಮೇಶ್ವರ ನಗರದ ನಿವಾಸಿ ಗೋವಿಂದಪ್ಪಗೆ ಎರಡು ತಿಂಗಳ ಹಿಂದೆ ಆಪರೇಷನ್ ಆಗಿದ್ದು, ವೈದ್ಯರು ಒಂದು ಕಾಲು ತೆಗೆದಿದ್ದಾರೆ. ಔಷಧ ಹಾಗೂ ಚಿಕಿತ್ಸೆ ಪಡೆಯಲು ಗದಗ ಜಿಮ್ಸ್ ಆಸ್ಪತ್ರೆಗೆ ಹೋಗಬೇಕಿದ್ದರಿಂದ ವಾಹನ ಸೌಲಭ್ಯವಿಲ್ಲದೆ ತಳ್ಳುವ ಗಾಡಿ ಮೂಲಕವೇ ಆತನನ್ನು ಕೂರಿಸಿಕೊಂಡು ಪತ್ನಿ ಮತ್ತು ಪುಟ್ಟ ಮಗ ಹೋಗುತ್ತಿದ್ದ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ದೃಶ್ಯ ಇಂದು ಬೆಳಗ್ಗೆ ಕಂಡು ಬಂತು.

ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಹೋಗಲು ಯತ್ನಿಸಿದೆ. ಅವರು ದುಪ್ಪಟ್ಟು ಹಣ ಕೇಳಿದರು. ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ಹಾಗಾಗಿ ತಳ್ಳುವ ಗಾಡಿಯಲ್ಲೇ ಹೋಗುತ್ತಿದ್ದೇವೆ, ಯಾರಾದರೂ ಸಹಾಯ ಮಾಡಿ ಎಂದು ಗೋವಿಂದಪ್ಪ ಮತ್ತು ಪತ್ನಿ ಅಂಗಲಾಚಿದ್ದಾರೆ.


Spread the love

About Laxminews 24x7

Check Also

ಯಾದವಾಡದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

Spread the love *ಅಕ್ರಮ ಸಾರಾಯಿ ಚಟುವಟಿಕೆಯ ಬಗ್ಗೆ ನೀಗಾ ವಹಿಸಿ, ಕಠಿಣ ಕ್ರಮಕ್ಕೆ ಮುಂದಾಗಿ- ಶಾಸಕ ಬಾಲಚಂದ್ರ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ