Breaking News
Home / ರಾಜಕೀಯ / ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ದಾವಣಗೆರೆಯಲ್ಲಿ ಸೋಂಕಿತೆ ಸಾವು

ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ದಾವಣಗೆರೆಯಲ್ಲಿ ಸೋಂಕಿತೆ ಸಾವು

Spread the love

ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆಕ್ಸಿಜನ್ ಸಮಸ್ಯೆಯೂ ದೊಡ್ಡ ಮಟ್ಟದಾಗಿ ಕಾಡುತ್ತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಈಗಾಗಲೇ ಹಲವರು ಮೃತಪಟ್ಟಿದ್ದಾರೆ. ಹರಿಹರ ತಾಲೂಲು ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತೆ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೆ ಸೋಂಕಿತೆ ಸಾವನ್ನಪ್ಪಿದ್ದಾರೆ. ಸಾಯುವುದಕ್ಕೂ ಮುನ್ನ ಸೋಂಕಿತೆ ವಿಡಿಯೋ ಮಾಡಿದ್ದಾರೆ.

ಸಾಯುವುದಕ್ಕೂ ಮುನ್ನ ಅಕ್ಸಿಜನ್ ಬರುತ್ತಿಲ್ಲ ಎಂದು ಸೋಂಕಿತ ಮಹಿಳೆ ವಿಡಿಯೋ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದ ಕಾರಣ ಮಹಿಳೆ ಮೃತಪಟ್ಟಿದ್ದಾರೆ ಅಂತ ಮೃತ ಮಹಿಳೆ ಸಂಬಂಧಿಕರು ಹರಿಹರ ತಾಲೂಕು ಆಸ್ಪತ್ರೆ ವಿರುದ್ಧ ಆರೋಪಿಸುತ್ತಿದ್ದಾರೆ. ಹನಗವಾಡಿ ಗ್ರಾಮದ ಜಯಮ್ಮ ಎನ್ನುವರಿಗೆ ಕಳೆದ ಐದು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಉಸಿರಾಟದ ತೊಂದರೆಯಿಂದ ಹರಿಹರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅಕ್ಸಿಜನ್ ಸರಿಯಾಗಿ ಸಪ್ಲೆ ಆಗದೆ ಸೋಂಕಿತೆ ಪರದಾಡಿದ್ದಾರೆ. ಈ ವೇಳೆ ವಿಡಿಯೋ ಮಾಡಲಾಗಿದೆ. ಮಾಡಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯವೇ ಜಯಮ್ಮನ ಸಾವಿಗೆ ಕಾರಣ ಎಂದು ಸಂಬಂಧಿಕರು ಕಿಡಿಕಾರಿದ್ದಾರೆ.

2 ಗ್ರಾಮಗಳಲ್ಲಿ ಸ್ವಯಂ ನಿರ್ಬಂಧ
ಕೊರೊನಾ ಹೆಚ್ಚಾದ ಹಿನ್ನೆಲೆ 2 ಗ್ರಾಮಗಳು ಸ್ವಯಂ ನಿರ್ಬಂಧಕ್ಕೆ ಮುಂದಾಗಿವೆ. ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಮತ್ತು ಬೇವಿನಹಳ್ಳಿ ಸ್ವಯಂ ನಿರ್ಬಂಧ ಮುಂದಾದ ಗ್ರಾಮಗಳು. ಪರಸ್ಥಳದಿಂದ ಯಾರು ಗ್ರಾಮಕ್ಕೆ ಬರುವಂತಿಲ್ಲ. ಗ್ರಾಮಸ್ಥರು ಅನಗತ್ಯವಾಗಿ ಹೊರಗೆ ಹೋಗುವಂತಿಲ್ಲ. ಕಳೆದ ಒಂದು ವಾರದಿಂದ ಹರಿಹರ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಕಾರಣ ಈ ನಿರ್ಧಾರಕ್ಕೆ ಗ್ರಾಮಸ್ಥರು ಬಂದಿದ್ದಾರೆ. ಗ್ರಾಮಕ್ಕೆ ಪ್ರವೇಶ ಮಾಡುವ ರಸ್ತೆಗೆ ಮುಳ್ಳಿನ ಬೇಲಿಯನ್ನು ಹಾಕಿದ್ದು, ಆಟೋಗೆ ಧ್ವನಿ ವರ್ಧಕ ಕಟ್ಟಿಕೊಂಡು ಯುವಕರು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ