ಕುಷ್ಟಗಿ : ಮುದೇನೂರು ಹಿಂದುಳಿದ ವರ್ಗಗಳ ವಿದ್ಯಾರ್ಥಿ ವಸತಿ ನಿಲಯದ ಕೋವಿಡ್ ಕೇರ್ ಸೆಂಟರ್ ನಲ್ಲಿ85 ವರ್ಷದ ವಯೋವೃದ್ದೆ ಆಸಂಗೆಮ್ಮ ಕೋವಿಡ್ ಸೋಂಕು ದೃಢವಾಗಿದ್ದರೂ ಲವಲವಿಕೆಯಿಂದ ಇದ್ದು ಕೋವಿಡ್ ಸೋಂಕಿಗೆ ಹೆದರದೆ ಇತರರಿಗೆ ಮಾದರಿಯಾಗಿದ್ದಾರೆ.
ಮುದೇನೂರು ಕೋವಿಡ್ ಕೇರ್ ಸೆಂಟರ್ ನಲ್ಲಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಅಸಂಗೆಮ್ಮ ಹಿರಿಯರು. ಕಿವಿ ಕೇಳಿಸದೇ ಇದ್ದರೂ, ಸೋಂಕಿತರ ಜೊತೆ ಧೈರ್ಯಗೆಡದೇ ಲವಲವಿಕೆಯಿಂದ ಇರುವುದು ಗಮನಾರ್ಹ ಎನಿಸಿದೆ.
ಮಂಗಳವಾರ ಸಂಜೆ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಹಾಗೂ ಪಿಎಸೈ ತಿಮ್ಮಣ್ಣ ನಾಯಕ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಸದರಿ ಅಜ್ಜಿ ಅಸಂಗೆಮ್ಮ ಅವರನ್ನು ಮಾತನಾಡಿಸಿ ಯೋಗಕ್ಷೇಮ ವಿಚಾರಿಸಿ ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ.
ಕೊರೊನಾ ಸೋಂಕು ದೃಢವಾದರೆ ಎದೆಗುಂದದೇ ಮಾನಸಿಕ ಸ್ಥೈರ್ಯದಿಂದ ಎದುರಿಸುತ್ತಿರುವ ಮುದೇನೂರಿನ ಅಸಂಗೆಮ್ಮ ಇತರರಿಗೆ ಮಾದರಿ ಆಗಿದ್ದಾರೆ ಎಂದಿದ್ದಾರೆ.
Laxmi News 24×7