ಚಿಕ್ಕೋಡಿ – ಮಂಗಳವಾರ ಚಿಕ್ಕೋಡಿ ನಗರದ (ಬಾಣಂತಿಕೋಡಿ) ಬಾಲಕಿಯರ ವಸತಿ ನಿಲಯದಲ್ಲಿ ತಾಲ್ಲೂಕಾಡಳಿತ, ತಾಲ್ಲೂಕಾ ಆರೋಗ್ಯ ಕೇಂದ್ರ ಹಾಗೂ ಜೊಲ್ಲೆ ಚಾರಿಟಿ ಫೌಂಡೇಶನ್ ಮತ್ತು ಭಾರತೀಯ ವೈದ್ಯಕೀಯ ಹಾಗೂ ಆಯುಷ್ ಸಂಸ್ಥೆ ವತಿಯಿಂದ ಸೋಂಕಿತರ ಚಿಕಿತ್ಸೆಗಾಗಿ 12 ಆಕ್ಸಿಜನೇಟೆಡ್ ಹಾಸಿಗೆ ಹಾಗೂ 08 ಸಾಮಾನ್ಯ ಹಾಸಿಗೆ ಸಾಮರ್ಥ್ಯದ ನೂತನ ಕೋವಿಡ್ ಆರೈಕೆ ಕೇಂದ್ರವನ್ನು ಆರಂಭಿಸಲಾಯಿತು.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು.
Laxmi News 24×7