Breaking News

ಕೊರೊನಾಗೆ ಬೆಳಗ್ಗೆ ಪತಿ ಸಂಜೆ ಪತ್ನಿ ಬಲಿ

Spread the love

ಚಾಮರಾಜನಗರ: ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ದಂಪತಿ ಬಾಳಿಗೆ ಕೊರೊನಾ ಕೊಳ್ಳಿ ಇಟ್ಟಿದ್ದು ಒಂದೇ ದಿನ ಗಂಡ-ಹೆಂಡತಿ ಕೊರೊನಾಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಸುದರ್ಶನ(51) ಹಾಗೂ ಹೇಮಲತಾ (46) ಮೃತರು. ಕಳೆದ ಒಂದು ವಾರದ ಹಿಂದೆ ಈ ದಂಪತಿಗೆ ಕೋವಿಡ್ ದೃಢವಾಗಿತ್ತು. ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು‌. ಆದರೆ ವಿಧಿಯ ಆಟವೇ ಬೆರೆಯಾಗಿತ್ತು ಅನಿಸುತ್ತೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಸುದರ್ಶನ್ ಅಸುನೀಗಿದರೇ ಸಂಜೆ ಹೇಮಲತಾ ಕೂಡ ಕೊನೆಯುಸಿರೆಳೆದಿದ್ದಾರೆ.ಸಾವಿನಲ್ಲೂ ಒಂದಾದ ಈ ದಂಪತಿಯ ಸಮಾಧಿಯನ್ನು ಅಕ್ಕಪಕ್ಕವೇ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಪುತ್ರ ಹೇಮಂತ್ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ.ಹತ್ತಾರು ವರ್ಷಗಳಿಂದ ಶಾಲಾ-ಕಾಲೇಜು ಮುಂಭಾಗ ಚುರುಮುರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಸುದರ್ಶನ್​​ ಗುಂಡ್ಲುಪೇಟೆ ಪಟ್ಟಣದಲ್ಲಿ ಚಿರಪರಿಚಿತ ವ್ಯಕ್ತಿಯಾಗಿದ್ದರು.


Spread the love

About Laxminews 24x7

Check Also

ಪತ್ನಿಯನ್ನು ಹೊತ್ತು ಅಂಜನಾದ್ರಿಯ 575 ಮೆಟ್ಟಿಲು ಏರಿದ ಭೂಪ

Spread the loveಗಂಗಾವತಿ(ಕೊಪ್ಪಳ): ತಾಲೂಕಿನ ಪ್ರಮುಖ ಧಾರ್ಮಿಕ ಹಾಗೂ ಪ್ರಾಕೃತಿಕ ತಾಣವಾಗಿರುವ ಚಿಕ್ಕರಾಂಪೂರದ ಬಳಿ ಇರುವ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ