Breaking News
Portrait an unknown male doctor holding a stethoscope behind

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಮೇ.25 ರಂದು ತಜ್ಞವೈದ್ಯರು, ವೈದ್ಯಾಧಿಕಾರಿಗಳ ನೇಮಕಾತಿಗೆ ನೇರ ಸಂದರ್ಶನ

Spread the love

ಹಾವೇರಿ : ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ನಿರ್ವಹಣೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ರಚಿಸಲಾದ ಐ.ಸಿ.ಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಕಾರ್ಯಗತಗೊಳಿಸಿ ನಿರ್ವಹಿಸಲು ಹೆಚ್ಚುವರಿಯಾಗಿ ಆರು ತಜ್ಞ ವೈದ್ಯರು, 12 ವೈದ್ಯಾಧಿಕಾರಿಗಳು ಹಾಗೂ ತಲಾ ಓರ್ವ ಮೇಂಟೆನೆನ್ಸ್ ಇಂಜನೀಯರ್ ಹಾಗೂ ಐ.ಸಿ.ಯು ಟೆಕ್ನಿಷಿಯನ್ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಮೇ 25 ರಂದು ಬೆಳಿಗ್ಗೆ 10 ಗಂಟೆಯಿಂದ ನೇರ ಸಂದರ್ಶನ ಹಾವೇರಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯಲ್ಲಿ ಜರುಗಲಿದೆ.

 

ತಜ್ಞವೈದ್ಯರ ಹುದ್ದಗೆ ಜನರಲ್ ಮೆಡಿಷನ್(ಎಂ.ಡಿ/ಡಿಪ್ಲೋಮಾ) ಮತ್ತು ಅನಸ್ಥೆಶಿಯಾ (ಎಂ.ಡಿ.ಡಿಪ್ಲೋಮಾ) ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ 1.20 ಲಕ್ಷ ವೇತನ ನೀಡಲಾಗುವುದು. ವೈದ್ಯಾಧಿಕಾರಿ ಹುದ್ದೆಗೆ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ ರೂ. 60,000/- ವೇತನ ನೀಡಲಾಗುವುದು.
ಮೇಂಟೆನೆನ್ಸ್ ಇಂಜನೀಯರ್ ಹುದ್ದಗೆ ಬಯೋಮೆಡಿಕಲ್ ಇಂಜನೀಯರಿಂಗ್ ( ಬಿಇ ಅಥವಾ ಹುದ್ದಗೆ ನಿಗಪಡಿಸಿದ ವಿದ್ಯಾರ್ಹತೆ) ಹಾಗೂ ಐ.ಸಿ.ಯು ಟೆಕ್ನಿಷಿಯನ್ ಹುದ್ದೆಗೆ ಬಯೋಮೆಡಿಕಲ್ ಇಂಜನೀಯರಿಂಗ್ (ಡಿಪ್ಲೋಮಾ ಅಥವಾ ಹುದ್ದಗೆ ನಿಗಪಡಿಸಿದ ವಿದ್ಯಾರ್ಹತೆ) ವಿದ್ಯಾರ್ಹತೆ ಹೊಂದಿರಬೇಕು. ಮಾಸಿಕ 25 ಸಾವಿರ ರೂ. ವೇತನ ನೀಡಲಾಗುವುದು.

 

ಮೇರಿಟ್ ಆಧಾರದಲಿ ನೇಮಕಾತಿ ಮಾಡಲಾಗುವುದು. ಗರಿಷ್ಠ ಆರು ತಿಂಗಳ ಅವಧಿಗೆ ಅಥವಾ ಈ ಕಚೇರಿಯ ಮುಂದಿನ ಆದೇಶವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಅಭ್ಯರ್ಥಿಗಳನ್ನು ಸರ್ಕಾರದ ಸೇವೆಯಲ್ಲಿ ಮುಂದುವರಿಸಲಾಗುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

 

ಅರ್ಹ ಅಭ್ಯರ್ಥಿಗಳು ದಿನಾಂಕ 25-05-2021 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಕೊಠಡಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವ ಸಮಯದಲ್ಲಿ ತಮ್ಮ ಹುದ್ದೆಗೆ ನಿಗಧಿಪಡಿಸಿದ ವಿದ್ಯಾರ್ಹತೆಗಳ ಮೂಲ ದಾಖಲಾತಿಗಳನ್ನು ಹಾಗೂ ಅದರ ಒಂದು ನಕಲು ಪ್ರತಿಗಳ ಸೆಟ್‍ನ್ನು ತರಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ