ಬೆಂಗಳೂರು: ಕೋವಿಡ್ ಪ್ರೇರಿತ ಲಾಕ್‌ಡೌನ್‌ನಿಂದಾಗಿ ಉಂಟಾಗಿರುವ ನಷ್ಟಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಆರ್ಥಿಕ ಪ್ಯಾಕೇಜ್ ಕುರಿತು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಾಂತರ ಪ್ರದೇಶಗಳಿಗೆ ಕೋವಿಡ್ ಎರಡನೇ ಅಲೆ ತಗುಲಿ ಜನ ವಿಲವಿಲ ಒದ್ದಾಡ್ತಿದ್ದಾರೆ. ಮಾನ್ಯ ಯಡಿಯೂರಪ್ಪನವರೇ ನಿನಗೆ ಒಂದು ಪ್ರಶ್ನೆ ಕೇಳ್ತೇನೆ. ಕಳೆದ ಒಂದು ವಾರದಿಂದ ನಗರದ ರಿಂಗ್ ರಸ್ತೆಗಳಿಗೆ 25 ಸಾವಿರ ಕೋಟಿ ಯೋಜನೆ ಕೈಗೆತ್ತಿಕೊಂಡಿದ್ದೀರಿ. ಸಾಲ ಸೋಲಮಾಡಿ ಈ ಯೋಜನೆ ಮಾಡ್ತಿದ್ದೀರಾ..? ಯಾವ ಆಸಕ್ತಿ ಇದ್ರಲ್ಲಿ ನಿಮಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದು 20% ಕಮಿಷನ್ ಕಾರ್ಯಕ್ರಮವೇ ಅಥವಾ ಇದೇ ರೀತಿ ಪ್ಯಾಕೇಜ್ ಕಾರ್ಯಕ್ರಮವೊ, ದುಡಿಯೋ ಜನರು ಸಾಯ್ತಿದ್ದಾರೆ ಅವರ ಜೀವ ಉಳಿಸಿಬೇಕು. ರೋಗದಿಂದ ತತ್ತರಿಸಿ ಒದ್ದಾಡ್ತಿದ್ದಾರೆ ಅವರನ್ನ ಕಾಪಾಡಬೇಕು. ಅದು ಸರ್ಕಾರದ ಆದ್ಯ ಕರ್ತವ್ಯ
ತೆರಿಗೆ ಬರುತ್ತೆ ಅಂದ್ರೆ ಅದು ಸುಮ್ಮನೆ ಬರಲ್ಲ ಎಲ್ಲಾ ದುಡಿಯೊ ಜನರು ತೆರಿಗೆ ಕಟ್ದಾಗ ಮಾತ್ರ ಖಜಾನೆ ಭರ್ತಿಯಾಗುತ್ತೆ. ಅವರು ಕಷ್ಟದಲ್ಲಿದ್ದಾಗ ಕೊಡೋದಕ್ಕೆ ಯಾರಪ್ಪನ ಮನೆ ಆಸ್ತಿ ಅದು ಎಂದು ಪ್ರಶ್ನಿಸಿದ್ದಾರೆ.
Laxmi News 24×7