Breaking News
Home / ರಾಜ್ಯ / ಬ್ಲಾಕ್ ಫಂಗಲ್ ಪೀಡಿತ ಯುವಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ಡಿಸಿಎಂ ಸವದಿ

ಬ್ಲಾಕ್ ಫಂಗಲ್ ಪೀಡಿತ ಯುವಕನ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿದ ಡಿಸಿಎಂ ಸವದಿ

Spread the love

ಚಿಕ್ಕೋಡಿ:ರಾಜ್ಯಾದ್ಯಂತ ಕೊವಿಡ್ ಎರಡನೆಯ ಅಲೆಯ ನಡುವೆಯೆ ಕೊವಿಡ್ ಚಿಕಿತ್ಸೆ ಪಡೆದು ಗುಣಮುಖರಾದವರನ್ನು ಭಾಧಿಸುತ್ತಿರುವ ಕಪ್ಪು ಶಿಲಿಂಧ್ರ (ಬ್ಲಾಕ್ ಫಂಗಲ್ ಇಂಪೆಕ್ಷನ್) ರೋಗ ಹಲವರಲ್ಲಿ ಕಂಡು ಬರುತ್ತಿದೆ.ಆರಂಭದಲ್ಲಿ ಗಲ್ಲ,ಮೂಗು,ಕಣ್ಣಿನ ರೆಪ್ಪೆಯ ಮೇಲ್ಭಾಗದಲ್ಲಿ ಬಾವು ಕಾಣಿಸಿಕೊಂಡು ನಂತರದಲ್ಲಿ ದೇಹದ ಒಳಭಾಗಕ್ಕೆ ಹರಡಿ ಜೀವಕ್ಕೆ ಎರವಾಗುತ್ತಿರುವ ಈ ಕಾಯಿಲೆ ಕೋವಿಡ್ ಚಿಕಿತ್ಸೆ ಪಡೆದವರಲ್ಲಿ ಕಂಡುಬರುತ್ತಿರುವದು ತೀವ್ರ ತಲೆನೋವಾಗಿ ಪರಿಣಮಿಸಿದೆ.

ಚಿಕಿತ್ಸೆಗೆ ಬಳಕೆ ಆಗುವ ಔಷಧಿಗಳ ಅಡ್ಡಪರಿಣಾಮ ಎಂದು ಹೇಳುತ್ತಿದ್ದರೂ ಕೂಡ ಕೋವಿಡ್ ಗಿಂತ ಮುಂದುವರೆದ ಕಾಯಿಲೆಯಾಗಿ ಬ್ಲಾಕ್ ಫಂಗಲ್ ಇಂಪೆಕ್ಷನ್ ಸದ್ಯ ಜೀವಹಾನಿ ಮಾಡುತ್ತಿದೆ.ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ,ಬಿಪಿ,ಶುಗರ್, ಮತ್ತು ಇತರೆ ದೈನಂದಿನ ಕಾಯಲೆಗಳಿಂದ ಬಳಲುತ್ತಿರುವ ಜನರಲ್ಲಿ ಕಂಡು ಬರಿತ್ತಿರುವ ಕಪ್ಪು ಶಿಲಿಂದ್ರ ಕಾಯಿಲೆ ಅಥಣಿಗೂ ಹಬ್ಬಿದ್ದು ತಾಲೂಕು ಪಂಚಾಯತಿಯ ನರೇಗಾ ಯೋಜನೆಯಲ್ಲಿ ಅಭಿಯಂತರರಾಗಿ ಕರ್ತವ್ಯ ನೀರ್ವಹಿಸುತ್ತಿದ್ದ ಆನಂದ ಕುಳಲಿ ಸದ್ಯ ಈ ಕಾಯಿಲೆಗೆ ತುತ್ತಾಗಿದ್ದಾರೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆಯೆ ಮಾನವೀಯತೆ ಮೆರೆದ ಡಿಸಿಎಮ್ ಲಕ್ಷ್ಮಣ ಸವದಿ ಸದ್ಯ ಮೀರಜ್ ಪಟ್ಟಣದ ಡಾಕ್ಟರ್ ಮೋಹನ್ ಭಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಕುಳಲಿ ಅವರ ಚಿಕಿತ್ಸೆಗೆ ಸಹಾಯಧನ ನೀಡಲು ಮುಂದಾಗಿದ್ದು ಅಗತ್ಯ ಬಿದ್ದರೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದ್ದಾರೆ.

ಈ ಮೂಲಕ ಸಾರ್ಜನಿಕವಾಗಿ ಮತ್ತು ವೈಯುಕ್ತಿಕವಾಗಿ ತನ,ಮನ,ಧನದಿಂದ ಡಿಸಿಎಮ್ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಜನರ ಜೀವರಕ್ಷಣೆಗೆ ಮುಂದಾಗುತ್ತಿದ್ದು ಕೊವಿಡ್ ಎರಡನೆಯ ಅಲೆ ನಿರಂತರವಾಗಿ ಸಾವು ನೋವು ಹೆಚ್ಚಿಸುತ್ತಿರುವದರ ನಡುವೆಯೆ ಹೊಸದಾಗಿ ಕಂಡುಬರುತ್ತಿರುವ ಕಪ್ಪು ಶಿಲಿಂಧ್ರ ಕಾಯಿಲೆ ಪೀಡಿತರ ಚಿಕಿತ್ಸೆಗೂ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದ ಸಾರಿಗೆ ಸಚೀವ ಸವದಿ ಅವರ ಬಗ್ಗೆ ಜನಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು ಸಾಮಾಜಿಕ ಕಳಕಳಿ ಮರೆಯುತ್ತಿರುವ ಸಾಹುಕಾರ್ ಸವದಿ ಹೃದಯ ಶ್ರೀಮಂತಿಕೆಯಿಂದಲೂ ಜನಮಾನಸದಲ್ಲಿ ಬೆಳಗುತ್ತಿದ್ದಾರೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ