Breaking News

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ದಿನ ಡ್ಯೂಟಿ ಮಾಡಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿಯಾಗಿದ್ದಾರೆ.

Spread the love

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ದಿನ ಡ್ಯೂಟಿ ಮಾಡಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿಯಾಗಿದ್ದಾರೆ. 52 ವರ್ಷದ ವಿಜಯಶ್ರೀ ನಾಗನೂರೆ ಸೋಂಕಿಗೆ ಬಲಿಯಾದ ಅಧಿಕಾರಿ. ಇವರು ಬೆಳಗಾವಿ ನಗರದ ಯಮನಾಪುರ ನಿವಾಸಿ. ವಿಜಯಶ್ರೀ ನಾಗನೂರೆಗೆ ಮೇ 3 ರಂದು ಕೊರೊನಾ ಸೋಂಕು ದೃಢವಾಗಿತ್ತು. ಕಳೆದ ಹನ್ನೆರಡು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮೇ 15) ಬೆಳಗಿನ ಜಾವ ಸಾವನ್ನಪ್ಪಿದ್ದಾರೆ.

ವಿಜಯಶ್ರೀ ಸದ್ಯ ಬೆಳಗಾವಿಯ ಉಪ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪ ತಹಶೀಲ್ದಾರ್ ವಿಜಯಶ್ರೀ ನಾಗನೂರೆ ಕುಟುಂಬದ ಹತ್ತು ಜನರಿಗೆ ಸೋಂಕು ದೃಢವಾಗಿದ್ದು, ಕುಟುಂಬಸ್ಥರು ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಬ್ಲ್ಯಾಕ್ ಫಂಗಸ್​ಗೆ ಹೆಡ್ ಕಾನ್ಸ್​ಟೇಬಲ್​ ಸಾವು ಶಂಕೆ
ಕಲಬುರಗಿ: ಬ್ಲ್ಯಾಕ್ ಫಂಗಸ್​ಗೆ ಅಶೋಕ ನಗರ ಠಾಣೆಯ ಹೆಡ್ ಕಾನ್ಸ್​ಟೇಬಲ್ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಹೆಡ್ ಕಾನ್ಸ್​ಟೇಬಲ್ ಮಲ್ಲಿಕಾರ್ಜುನ ಕೊರೊನಾದಿಂದ ಗುಣಮುಖರಾಗಿದ್ದರು. ಕೊರೊನಾ ಚೇತರಿಕೆ ಬಳಿಕ 530 ರಷ್ಟು ಶೂಗರ್​ನಿಂದ ಬಳಲುತ್ತಿದ್ದರು. ಕೊರೊನಾ ಚೇತರಿಕೆ ಬಳಿಕ ಮನೆಗೆ ಬಂದಾಗ ಕಣ್ಣು ಕಳೆದುಕೊಂಡಿದ್ದರು. 45 ವರ್ಷದ ಮಲ್ಲಿಕಾರ್ಜುನ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇವರು ಬ್ಲಾಕ್ ಫಂಗಸ್​ಗೆ ಬಲಿಯಾದರಾ ಅಥವಾ ಬೇರೆಯದಕ್ಕೆ ಬಲಿಯಾದರ ಎನ್ನುವುದನ್ನು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಬೇಕಾಗಿದೆ.

16 ವರ್ಷದ ಬಾಲಕಿ ಕೊವಿಡ್​ಗೆ ಬಲಿ
ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 16 ವರ್ಷದ ಬಾಲಕಿ ಕೊವಿಡ್​ಗೆ ಬಲಿಯಾಗಿದ್ದಾರೆ. ಕೊರೊನಾ ಹಿನ್ನೆಲೆ ಮೇ 3ರಂದು ತುಮಕೂರಿನ ರಾಜೀವ್ ಗಾಂಧಿ ನಗರದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದರು. ಕಫ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ( ಮೇ 14) ರಾತ್ರಿ ಮರಣ ಹೊಂದಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

Spread the loveಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ