ಮಂಗಳೂರು : ದ.ಕ. ಜಿಲ್ಲೆಯಲ್ಲಿ ಮಂಗಳವಾರ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯ ಆರಂಭಗೊಂಡಿದೆ.
ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡವರಿಗೆ ಪ್ರಥಮ ಹಂತವಾಗಿ ನಗರದ ವೆನ್ಲಾಕ್ ಆಸ್ಪತ್ರೆ ಹಾಗೂ ನಾಲ್ಕು ತಾಲ್ಲೂಕು ಆಸ್ಪತ್ರೆ ಗಳಲ್ಲಿ ಮಂಗಳವಾರ ಲಸಿಕೆ ನೀಡಲಾಗುತ್ತಿದೆ.
ಮಂಗಳವಾರ ವೆನ್ಲಾಕ್ ನಲ್ಲಿ 250 ಮಂದಿ 18 ರಿಂದ 44 ವರ್ಷದವರಿಗೆ ಆನ್ ಲೈನ್ ನೋಂದಣಿ ಪಡೆದವರಿಗೆ ಲಸಿಕೆ ನೀಡಲಾಗುತ್ತಿದ್ದು ಯುವಕರು ಉತ್ಸಾಹದಿಂದ ಕೇಂದ್ರಕ್ಕೆ ಲಸಿಕೆ ಪಡೆಯಲು ಬರುತ್ತಿದ್ದಾರೆ ಎಂದು ಕೋವಿಡ್ ಲಸಿಕೀಕರಣದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.
ಈಗಾಗಲೇ ನೋಂದಾಯಿಸಿಕೊಂಡಿರುವ ದಿನಾಂಕ ನಿಗದಿಯಾಗಿರುವ 18 ರಿಂದ 44 ವರ್ಷ ದವರೆಗೆ ಮುಂದಿನ ಒಂದು ವಾರ ವೆನ್ ಲಾಕ್ ಹಾಗೂ ತಾಲೂಕು ಆಸ್ಪತ್ರೆಯ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
Laxmi News 24×7