Breaking News

ಲಸಿಕೆ ವಿತರಣೆಯಲ್ಲೂ ರಾಜಕೀಯ ಇದು ಅತ್ಯಂತ ಕೀಳಮಟ್ಟದ ನಡೆಯಾಗಿದ್ದು ನಿತ್ಯ ಸುಳ್ಳು ಹೇಳಿಕೆ ಕೊಡುವ ನಾಲಾಯಕ್ಕು ಆರೋಗ್ಯ ಸಚಿವ : ಸುಧಾಕರ್ ವಿರುದ್ದ ಗುಂಡುರಾವ್ ಕಿಡಿ

Spread the love

ಬೆಂಗಳೂರು: ಲಸಿಕೆ ವಿತರಣೆಯಲ್ಲೂ ರಾಜಕೀಯ ಇದು ಅತ್ಯಂತ ಕೀಳಮಟ್ಟದ ನಡೆಯಾಗಿದ್ದು ನಿತ್ಯ ಸುಳ್ಳು ಹೇಳಿಕೆ ಕೊಡುವ ನಾಲಾಯಕ್ಕು ಆರೋಗ್ಯ ಸಚಿವ ತಕ್ಷಣ ವಜಾಗೊಳಿಸಿ ಎಂದು ಸುಧಾಕರ್ ವಿರುದ್ದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಆರೋಗ್ಯ ಸಚಿವರ ಸ್ವ ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಗೆ ಇತರೆ ಜಿಲ್ಲೆಗಳಿಗಿಂತ ಹೆಚ್ಚು ಲಸಿಕೆ ಪಡೆದಿರೋದಾಗಿ ತಿಳಿದು ಬಂದಿವ ವಿಚಾರವಾಗಿ ಟ್ವೀಟ್ ಮಾಡಿರುವ ಅವರು , ” ಸಚಿವ ಸುಧಾಕರ್ ಅವರೇ ಲಸಿಕೆ ವಿತರಣೆಯಲ್ಲೂ ರಾಜಕೀಯ ಇದು ಅತ್ಯಂತ ಕೀಳಮಟ್ಟದ ನಡೆ.ಒಂದು ಕಡೆ ಲಸಿಕೆ ಸರಬರಾಜಿನಲ್ಲಿ ನಿತ್ಯ ಸುಳ್ಳು ಹೇಳಿಕೆ ಇನ್ನೊಂದು ಕಡೆ ಅವರ ಕ್ಷೇತ್ರಕ್ಕೆ ಹೆಚ್ಚು ಕೊಡುಸುವ ಮುಖಾಂತರ ಅಪರಾಧ ಎಸಗಿದ್ದಾರೆ. ಅರೋಗ್ಯ ಸಚಿವರಾಗುವುದಕ್ಕೆ ನಾಲಾಯಕ್ಕು. ಅವರನ್ನು ವಜಾಗಳಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯ ಸರ್ಕಾರದ ವಿರುದ್ದ ಸರಣಿ ಟ್ವೀಟ್ ಮೂಲಕ ಹರಿಹಾಯ್ದಿದ್ದು”ಕರುಣೆ ಇಲ್ಲದ ರಾಜ್ಯ ಸರ್ಕಾರ ಜನರನ್ನು ಪೊಲೀಸರ ಮೂಲಕ ಥಳಿಸಿ ದುಂಡಾವರ್ತನೆ ತೋರಿಸುತ್ತಿದೆ. ಜನರನ್ನು ಥಳಿಸಿ ವಿಕೃತ ಸಂತೋಷ ಪಡುತ್ತಿರುವ ಈ ಸರ್ಕಾರಕ್ಕೆ ಮಾನವೀಯತೆಯಿಲ್ಲವೆ? ಪೊಲೀಸರಿಗೆ ಜನರನ್ನು ಅಟ್ಟಾಡಿಸಿಕೊಂಡು ಹೊಡೆಯಲು ಈ ಸರ್ಕಾರ ಸೂಚಿಸಿದೆಯೆ ಎಂಬುದನ್ನು ಪೊಲೀಸ್ ಮಹಾ ನಿರ್ದೇಶಕರು ಸ್ಪಷ್ಟಪಡಿಸಬೇಕು. ಯಡಿಯೂರಪ್ಪನವರೆ ಲಾಕ್‌ಡೌನ್ ಹೆಸರಲ್ಲಿ ನೀವು ರಾಜ್ಯದ ಜನತೆಗೆ ಕೊಡಬೇಕಾಗಿರುವುದು ಲಾಠಿ ಏಟುಗಳನಲ್ಲ. ನೀವು ಕೊಡಬೇಕಾಗಿರುವುದು ಆರೋಗ್ಯ ಭದ್ರತೆ ಮತ್ತು ಆರ್ಥಿಕ ಭದ್ರತೆ. ನಿಮ್ಮ ಸರ್ಕಾರ ಜನರಿಗೆ ಇಲ್ಲಿಯವರೆಗೂ ಯಾವ ಪ್ಯಾಕೇಜ್ ಕೊಟ್ಟಿದೆ? ಕನಿಷ್ಟ ಪಕ್ಷ ನಿಮ್ಮ ಸರ್ಕಾರದಿಂದ ಬಡವರಿಗೆ ಆಹಾರದ ಕಿಟ್ ಕೊಡುವ ವ್ಯವಸ್ಥೆಯಾದರೂ ಆಗಿದೆಯೆ? ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳೇ ,’ಅಕ್ಕನ ಮಗಳು ಬಡವಾಗಬಾರದು, ಅಕ್ಕಿಯೂ ಖಾಲಿಯಾಗಬಾರದು’ ಎಂದರೆ ಹೇಗೆ? ಮೊದಲು ಬಡ ಜನರಿಗೆ ಸಹಾಯಧನ ಹಾಗೂ ಆಹಾರದ ಕಿಟ್ ಕೊಡುವ ವ್ಯವಸ್ಥೆ ಮಾಡಿ. ನಂತರ ನಿಮ್ಮ ಕಠಿಣ ಲಾಕ್‌ಡೌನ್ ಜಾರಿ ಮಾಡಿ. ಬಡವ ಒಪ್ಪೊತ್ತಿನ ಊಟವನ್ನು ದುಡಿದು ತಿನ್ನಬೇಕು. ದುಡಿಯುವವನ ಕೈ ಕಟ್ಟಿ ಹಾಕಿದರೆ, ಅವನೇನು ಮನೆಯಲ್ಲಿ ಮಣ್ಣು ತಿನ್ನಬೇಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ