Breaking News

‘ಪ್ರಚಾರ ಮಂತ್ರಿ’ ಮೋದಿ; ಪ್ರಧಾನಿ ವಿರುದ್ಧ ಕಾಂಗ್ರೆಸ್ ಕಿಡಿ

Spread the love

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ‘ಪ್ರಚಾರ ಮಂತ್ರಿ’ ಎಂದು ವ್ಯಂಗ್ಯವಾಡಿದೆ.

ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ, ಬಂಗಾಳದ ಚುನಾವಣೆಗೆ ಹತ್ತಿಪ್ಪತ್ತು ಪ್ರಚಾರ ಸಭೆ ನಡೆಸಿದ ‘ಪ್ರಚಾರ ಮಂತ್ರಿ’ ಮೋದಿಯವರು ಇದುವರೆಗೂ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ನೋಡಲಿಲ್ಲ, ಆಕ್ಸಿಜನ್ ಪೂರೈಕೆ ಪರಿಸ್ಥಿತಿಯ ಅವಲೋಕನ ಸಭೆ ನಡೆಸಲಿಲ್ಲ, ವೈದ್ಯಕೀಯ ತಜ್ಞರ, ವಿಜ್ಞಾನಿಗಳ ಸಭೆ ನಡೆಸಲಿಲ್ಲ, ಪತ್ರಿಕಾಗೋಷ್ಠಿ ನಡೆಸಿ ದೇಶದ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ ಎಂದು ಟೀಕೆ ಮಾಡಿದೆ.

 

ಮಗದೊಂದು ಟ್ವೀಟ್‌ನಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವೈಫಲ್ಯವನ್ನು ಕಂಡಿದೆ ಎಂದು ಆರೋಪಿಸಿದೆ.

ಕೋವಿಡ್ ನಿರ್ವಹಣೆಯಲ್ಲಿ ವಿಫಲಗೊಂಡ ಬಿಜೆಪಿ ಸರ್ಕಾರಗಳ ರಕ್ಷಣಾತ್ಮಕ ವರಸೆ ಚೆನ್ನಾಗಿದೆ. ದುರಾಡಳಿತವನ್ನು ಟೀಕಿಸಿದರೆ ಇದು ಟೀಕಿಸುವ ಹೊತ್ತಲ್ಲ ಸಹಕರಿಸಿ ಸಲಹೆ ಕೊಡಿ ಎನ್ನುತ್ತಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರಂತಹ ಮೇಧಾವಿಗಳು ಸಲಹೆ ಕೊಟ್ಟರೂ ಅಹಂನಿಂದ ತಿರಸ್ಕರಿಸುತ್ತಾರೆ. ಭಾವನಾತ್ಮಕ ಪ್ರಚೋದನೆ ರಾಜಕಾರಣದ ಬಿಜೆಪಿಗೆ ಆಡಳಿತಾತ್ಮಕ ಚಿಂತೆಗಳಿಲ್ಲ ಎಂದು ವಾಗ್ದಾಳಿ ನಡೆಸಿದೆ.

 


Spread the love

About Laxminews 24x7

Check Also

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನ ವಿರೋಧಿಸಿ ಮತ್ತೆರಡು ಪಿಐಎಲ್ ಸಲ್ಲಿಕೆ

Spread the loveನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ