ಧಾರವಾಡ: ಜಗಳ ಬಿಡಿಸಲು ಹೋದವರಿಗೆನೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಧಾರವಾಡ ನಗರದ ಹನುಮಂತನನಗರ ಬಡಾವಣೆಯಲ್ಲಿ ನಡೆದಿದೆ.
ರೌಡಿಶೀಟರ್ ಮಂಜುನಾಥ್ ಹಿರೇಮನಿ ಹಾಗೂ ಆತನ ಸಹೋದರರಿಂದಲೇ ಈ ಹಲ್ಲೆ ನಡೆದಿದ್ದು, ಇಟ್ಟಿಗೆಗಳಿಂದ ಹಲ್ಲೆ ಮಾಡಿ ಗಾಯಗೊಳಿಸಲಾಗಿದೆ. ಐಪಿಎಲ್ ಸ್ಕೋರ್ ವಿಚಾರದಲ್ಲಿ ಅಣ್ಣಪ್ಪ ಹಾಗೂ ಲಕ್ಷ್ಮಣ್ ಎಂಬಾತನ ನಡುವೆ ಈ ಜಗಳ ಆರಂಭವಾಗಿತ್ತು. ಅಣ್ಣಪ್ಪ ಕಳೆದ ರಾತ್ರಿ ಲಕ್ಷ್ಮಣನಿಗೆ ಐಪಿಎಲ್ ಸ್ಕೋರ್ ಕೇಳಿದ್ದಾನೆ. ಆಗ ಲಕ್ಷ್ಮಣ್ ಗೊತ್ತಿಲ್ಲ ಎಂದಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. ಇದನ್ನ ಬಿಡಿಸಲು ಹೋಗಿದ್ದ ಮೈಲಾರಿಗೆ ಅಣ್ಣಪ್ಪ ಹಾಗೂ ಆತನ ರೌಡಿಶೀಟರ್ ಸಹೋದರ ಮಂಜುನಾಥ್ ಸೇರಿ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.
ಸದ್ಯ ಮೈಲಾರಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7