Breaking News

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೊಂದಿಗೆ ಸಂಪರ್ಕ ಹೊಂದಿದ್ದ ಸವದತ್ತಿ ಶಾಸಕ ಆನಂದ ಮಾಮನಿಗೆ ಕೊರೊನಾ ದೃಢ

Spread the love

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರೊಂದಿಗೆ ಸಂಪರ್ಕ ಹೊಂದಿದ್ದ ಸವದತ್ತಿ ಶಾಸಕ ಆನಂದ ಮಾಮನಿಗೆ ಕೊರೊನಾ ದೃಢಪಟ್ಟಿದೆ.

ಉಪಚುನಾವಣಾ ಪ್ರಚಾರಕ್ಕಾಗಿ ಸಿಎಂ ಬಿಎಸ್ ಯಡಿಯೂರಪ್ಪನವರು ಕಳೆದ ನಾಲ್ಕು ದಿನಗಳಿಂದ ಬೆಳಗಾವಿ, ಬಸವ ಕಲ್ಯಾಣ, ಮಸ್ಕಿಗೆ ಪ್ರವಾಸ ಬೆಳೆಸಿದ್ದರು. ಈ ವೇಳೆ ಸಿಎಂ ಬಿಎಸ್‍ವೈರನ್ನು ಭೇಟಿ ಮಾಡಿದ್ದ ಸವದತ್ತಿ ಶಾಸಕ ಆನಂದ ಮಾಮನಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಸೋಮವಾರದಿಂದ ಜ್ವರದಲ್ಲಿ ಬಳಲುತ್ತಿರುವ ಸಿಎಂ ಬಿಎಸ್‍ವೈ ಮಾತ್ರೆಗಳನ್ನು ಸೇವಿಸಿ ಚುನಾವಣೆ ಪ್ರಚಾರ ನಡೆಸಿದರು. ಈ ವೇಳೆ ಸಿಎಂ ಜೊತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಹಲವಾರು ಸಚಿವರು ಹಾಗೂ ಶಾಸಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಏಪ್ರಿಲ್ 12ನೇ ರಂದು ಮಸ್ಕಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‍ಗೆ ಕೊರೊನಾ ಪಾಸಿಟಿವ್ ಆಗಿದ್ದು, ಏಪ್ರಿಲ್ 14 ರಂದು ಬಿಜೆಪಿ ಶಾಸಕ ರಾಜೂಗೌಡ, ಪ್ರೀತಂ ಗೌಡ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.

ಸುರಪುರ ಶಾಸಕ ರಾಜೂಗೌಡರವರಿಗೆ ಏಪ್ರಿಲ್ 14ರಂದು ಕೊರೊನಾ ಕಾಣಿಸಿಕೊಂಡಿದ್ದು, ಗೋವಿಂದ ಕಾರಜೋಳರವರಿಗೆ ಏಪ್ರಿಲ್ 10ರಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಏಪ್ರಿಲ್ 14 ರಂದು ಹಾಸನ ಶಾಸಕ ಪ್ರೀತಂ ಗೌಡಗೆ ಕೊರೊನಾ ಕಾಣಿಸಿಕೊಂಡಿದ್ದು, ಇದೀಗ ಕ್ವಾರಂಟೈನಲ್ಲಿದ್ದಾರೆ.

ಸದ್ಯ ಸಿಎಂ ಯಡಿಯೂರಪ್ಪನವರಿಗೆ ಇಂದು ಕೊರೊನಾ ದೃಢ ಪಟ್ಟಿರುವುದರಿಂದ ಸಿಎಂ ಜೊತೆ ಸಂಪರ್ಕದಲ್ಲಿದ್ದ ಸಚಿವ ಸುಧಾಕರ್, ಬಸವರಾಜ ಬೊಮ್ಮಾಯಿ, ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಶ್ರೀರಾಮುಲು, ಬಾಲಚಂದ್ರ ಜಾರಕಿ ಹೊಳಿ, ರೇಣುಕಾ ಚಾರ್ಯ, ಪ್ರಭು ಚವ್ಹಾಣ್ ಕೋವಿಡ್ ಪರೀಕ್ಷೆ ಮಾಡಬೇಕಾಗುತ್ತದೆ.


Spread the love

About Laxminews 24x7

Check Also

ರಾಜ್ಯಾದ್ಯಂತ ಆ.27ರಿಂದ ಮತ್ತೆ ಮಳೆ

Spread the love ಬೆಂಗಳೂರು: ರಾಜ್ಯಾದ್ಯಂತ ಆ.27ರಿಂದ ಮತ್ತೆ ಮಳೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ