ವಿಜಯಪುರ: “ಅಶ್ಲೀಲ ಸಿಡಿ ಇಟ್ಟುಕೊಂಡು ಮಂತ್ರಿಯಾಗಲು, ಎಂಎಲ್ ಸಿ ಆಗಲು ಬ್ಲ್ಯಾಕ್ ಮೇಲ್ ಮಾಡುವವರಿಂದ ನಾನು ಕಲಿಯಬೇಕಾಗಿರುವುದು ಏನೂ ಇಲ್ಲ” ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜಕೀಯ ಸ್ವಾರ್ಥಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮಾಜಿ ಶಾಸಕ, ಸಚಿವರ ಅಶ್ಲೀಲ ಸಿಡಿ ಮಾಡಿದವರು ನಾಲಾಯಕರು” ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಾನು ಮಂತ್ರಿ ಆಗಲು ಯಾರಿಗೂ ಹಣ ಕೊಟ್ಟಿಲ್ಲ, ಯಾರ ಕೈಕಾಲು ಹಿಡಿದಿಲ್ಲ ಜೊತೆಗೆ ಸಪ್ಲಾಯರ್ ಕೆಲಸ ಕೂಡ ಮಾಡಿಲ್ಲ. ಹಾಗಾಗಿ ಸಪ್ಲೈಯರ್‌ಗಳಿಂದ ನಾನು ಏನನ್ನೂ ಕಲಿಯಬೇಕಿಲ್ಲ” ಎಂದು ಹೇಳಿದ್ದಾರೆ.
Laxmi News 24×7