ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಡಿ ಸಂತ್ರಸ್ತೆಯ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್.ಜಗದೀಶ್ ಕುಮಾರ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಕರ್ನಾಟಕದಲ್ಲಿ ವಕೀಲಿ ವೃತ್ತಿ ನಡೆಸಲು ಕೆ.ಎನ್.ಜಗದೀಶ್ ಕುಮಾರ್ ಹೆಸರನ್ನು ನೋಂದಾಯಿಸಿಯೇ ಇಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಈ ಕುರಿತು ವಕೀಲ ಎಸ್.ಬಸವರಾಜ್ ಎಂಬುವವರು ಕೇಳಿದ್ದ ಪ್ರಶ್ನೆಗೆ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸ್ಪಷ್ಟನೆ ನೀಡಿದ್ದು, ಕೆ.ಎನ್.ಜಗದೀಶ್ ಕುಮಾರ್ ಕರ್ನಾಟಕದಲ್ಲಿ ವಕೀಲಿ ವೃತ್ತಿಗೆ ನೋಂದಾಯಿಸಿಲ್ಲ ಎಂದು ತಿಳಿಸಿದೆ. KSBCಯಲ್ಲಿ ಹೆಸರು ನೋಂದಾಯಿಸಿಕೊಳ್ಳದೇ ಯಾವ ವಕೀಲರೂ ಯಾರ ಪರವೂ ವಕಾಲತ್ತು ಸಲ್ಲಿಸಿ ವಾದ ಮಾಡುವಂತಿಲ್ಲವಾದ ಕಾರಣ ಕೆ.ಎನ್.ಜಗದೀಶ್ ಕುಮಾರ್ ಮತ್ತೊಂದು ವಿವಾದಕ್ಕೆ ಸಿಲುಕಿದಂತಾಗಿದೆ.

Laxmi News 24×7