ಬೆಂಗಳೂರು : ರಾಜ್ಯ ಸರ್ಕಾರವು ಬಿಎಂಟಿಸಿ ನೌಕರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಬಿಎಂಟಿಸಿ ನೌಕರರಿಗೆ ಆರೋಗ್ಯ ವಿಮೆ ಮಾಡಿಸುವುದರ ಜೊತೆ ಆರೋಗ್ಯ ವಿಮಾ ಕಾರ್ಡ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.
28 ಸಾವಿರಕ್ಕೂ ಹೆಚ್ಚಿನ ನೌಕರರಿಗೂ ಇದು ಅನ್ವಯವಾಗಲಿದ್ದು, ಸರ್ಕಾರಿ ನೌಕರರಿಗಿರುವಂತೆ ಆರೋಗ್ಯ ವಿಮೆ ಮಾಡಿಸಲಾಗುತ್ತದೆ. ವಿಮೆಯಲ್ಲಿ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸೇರ್ಪಡೆಯಾಗಲಿದ್ದಾರೆ ಹೀಗಾಗಿ ಅಧಿಕಾರಿ ಮತ್ತು ನೌಕರರು ಪತಿ/ಪತ್ನಿ 24 ವರ್ಷದೊಳಗಿನ ಮಕ್ಕಳು ತಂದೆ ಮತ್ತು ತಾಯಿಯ ವಿವರ ನೀಡಬೇಕಿದೆ.
ಏಪ್ರಿಲ್ 10 ರೊಳಗೆ ಬಿಎಂಟಿಸಿ ಕಾರ್ಮಿಕ ವಿಭಾಗಗಕ್ಕೆ ವಿವರಗಳನ್ನು ತಲುಪಿಸುವಂತೆ ಘಟಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ
Laxmi News 24×7