ಬೆಂಗಳೂರು: 11 ತಿಂಗಳ ಕಂದಮ್ಮನಿಗೆ ಆಪತ್ತು ಎದುರಾಗಿದೆ. ಹೆತ್ತವರಿಗೆ ಖುಷಿಯೇ ಇಲ್ಲದಂತಾಗಿದೆ. ಮಗುವಿನ ಮುಖ ನೋಡಿ ನಿತ್ಯ ಕಣ್ಣೀರಿಡುವಂತಾಗಿದೆ. ಯಾಕಂದ್ರೆ ಇಡೀ ವೈದ್ಯಲೋಕ.. ಇಡೀ ಜಗತ್ತೇ ದಂಗಾಗುವಂಥಾ ಸಮಸ್ಯೆಗೆ ತುತ್ತಾಗಿದೆ. 11 ತಿಂಗಳ ಕಂದ ಜನೀಶ್. ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್ಕುಮಾರ್-ಜ್ಯೋತಿ ದಂಪತಿ ಪುತ್ರ. ಕುಟುಂಬದ ಪರಿಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ. ಇಂಥಾದ್ರ ಮಧ್ಯೆ ಮಗುವಿಗೆ ಜೀನ್ ಸಮಸ್ಯೆ ಕಾಣಿಸಿಕೊಂಡಿದೆ. ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ (Spinal Muscular Atrophy) ಅಂದ್ರೆ, ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಅಂತಾರೆ. ವೈದ್ಯಲೋಕದಲ್ಲೇ ಇದು ಅಪರೂಪದ ಸಮಸ್ಯೆ.
ಜನೀಶ್ ಉಳಿಯಬೇಕಾದ್ರೆ ಬರೋಬ್ಬರಿ 16 ಕೋಟಿಯ ಮೆಡಿಸಿನ್ ಬೇಕಾಗಿದೆ. ಅದೂ ಅಮೆರಿಕದಲ್ಲಿ ಸಿಗುವ ಔಷಧಿಯೇ ಬೇಕು. ಇಷ್ಟೊಂದು ದುಡ್ಡು ಎಲ್ಲಿಂದ ತರೋದು ಅಂತಾ ತಂದೆ ನವೀನ್ಕುಮಾರ್ ಕಣ್ಣೀರಿಟ್ಟಿದ್ದರು. ಈ ಪೋಷಕರ ಕಣ್ಣೀರಿಗೆ ಟಿವಿ9 ಸ್ಪಂದಿಸಿತ್ತು. ಒಂದು ತಿಂಗಳ ಹಿಂದೆ ಮಗುವಿನ ಕಾಯಿಲೆ, ಪೋಷಕರ ಪರಿಸ್ಥಿತಿ ಬಗ್ಗೆ ಟಿವಿ9 ಎಳೆಎಳೆಯಾಗಿ ವರದಿ ಪ್ರಸಾರ ಮಾಡಿತ್ತು. ಈ ಕರುನಾಡಿನ ಪುಣ್ಯವಂತರು, ಹೃದಯವಂತರು, ಆಳುವ ಸರ್ಕಾರ ನೆರವಿಗೆ ಬರಬೇಕು ಎಂದು ಟಿವಿ9 ಕಳಕಳಿಯಾಗಿ ಮನವಿ ಮಾಡಿಕೊಂಡಿತ್ತು. ಪೋಷಕರ ನೋವಿಗೆ, ಟಿವಿ9 ಮನವಿಗೆ ಸರ್ಕಾರ ಮುಂದೆ ಬಂದಿದೆ. ಟಿವಿ9 ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ.
ಅನುವಂಶಿಕ ಕಾಯಿಲೆಗಳ ಪತ್ತೆಗೆ ಪ್ರಯೋಗಾಲಯ ಸ್ಥಾಪನೆ
ಹೌದು ಮಾರ್ಚ್ 08ರಂದು ನಡೆದ ಬಜೆಟ್‌ನಲ್ಲಿ ನವಜಾತ ಶಿಶುಗಳಲ್ಲಿ ಅನುವಂಶಿಕ ಕಾಯಿಲೆಗಳ ಪತ್ತೆ ಮಾಡಲು ಪ್ರಯೋಗಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ 10 ಕೋಟಿ ರೂಪಾಯಿ ಮೀಸಲಿಡಲು ಸಿಎಂ ಬಿಎಸ್‌ವೈ ಸರ್ಕಾರ ಮುಂದಾಗಿದೆ. ಈ ವಿಚಾರ ಕೇಳಿ ಮಗುವಿನ ತಂದೆ ಟಿವಿ 9 ಗೆ ಧನ್ಯವಾದ ತಿಳಿಸಿದ್ದಾರೆ.
ಫೆಬ್ರವರಿ 5ರಂದು ನಮ್ಮ ಟಿವಿ 9 ನಡೆಸಿದ ಅಭಿಯಾನದಿಂದ 4 ಕೋಟಿ 60 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದ್ದು, ಇತರೆ ದಾನಿಗಳಿಂದ ಸೇರಿ ಈವರೆಗೆ ಬರೋಬ್ಬರಿ ಒಟ್ಟು 5 ಕೋಟಿ 60 ಲಕ್ಷ ರೂ. ಹಣ ಸಂಗ್ರಹವಾಗಿದೆ.
Laxmi News 24×7