Breaking News

ರಮೇಶಣ್ಣನ ಮರ್ಯಾದೆ ತೆಗೆಯಲು ಕೋಟ್ಯಂತರ ಹಣ ಖರ್ಚು ಮಾಡಿದ್ದಾರೆ, ದಿನೇಶ್ ಕಲ್ಲಹಳ್ಳಿ ಕೇವಲ ದಾಳ. : ಡಾ.ಕೆ. ಸುಧಾಕರ್​

Spread the love

ಬೆಂಗಳೂರು: ಉದ್ಯೋಗದ ಆಮಿಷವೊಡ್ಡಿ ಯುವತಿಯನ್ನ ಕಾಮತೃಷೆಗೆ ಬಳಸಿಕೊಂಡ ಆರೋಪ ಹೊತ್ತ ರಮೇಶ್​ ಜಾರಕಿಹೊಳಿ ಸದ್ಯ ಬಿಎಸ್​ವೈ ಸಚಿವ ಸಂಪುಟದಿಂದ ಔಟ್​ ಆಗಿದ್ದಾರೆ. ಆದರೂ ರಾಜ್ಯ ರಾಜಕೀಯಲ್ಲಿ ಸಿಡಿ ರಿಲೀಸ್​ನದ್ದೇ ಸದ್ದು. ಇದೊಂದು ಪ್ಲಾನ್ಡ್ ಎಫರ್ಟ್, ರಾಜಕೀಯದ ಷಡ್ಯಂತ್ರ. ಅವ್ರು ಸಂಪೂರ್ಣ‌ ನಿರ್ದೋಷಿ ಆಗಿ ಆಚೆ ಬರ್ತಾರೆ. ರಾಜಕಾರಣಿಗಳ ಬಗ್ಗೆ ಅಸಹ್ಯ ಹುಟ್ಟಿಸೋ ಸಂಚು ಅಡಗಿದೆ. ಎಲ್ಲರ ಮೇಲೂ ಪ್ರಯೋಗ ಮಾಡುವ ಅಸ್ತ್ರ ಆಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಹೇಳಿದ ಬೆನ್ನಲ್ಲೇ ಇದಕ್ಕೆ ಶಾಸಕ ರಾಜೂಗೌಡ ದ್ವನಿ ಗೂಡಿಸಿದ್ದಾರೆ.

ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೂಗೌಡ, ರಮೇಶ್​ ಜಾರಕಿಹೊಳಿಯ ಮರ್ಯಾದೆ ಕಳೆಯಲು ಕೋಟಿಕೋಟಿ ಹಣ ಹೂಡಿದ್ದಾರೆ, ಸಿಡಿ ಕೇಸ್​ನಲ್ಲಿ ದಿನೇಶ್ ಕಲ್ಲಹಳ್ಳಿ ಕೇವಲ ದಾಳ ಮಾತ್ರ ಎಂದರು. ನಾನೂ ರಮೇಶಣ್ಣ ಸಂಬಂಧಿಕರು. 2000ನೇ ವರ್ಷದಿಂದ ನಮ್ಮಿಬ್ಬರ ನಡುವೆ ಉತ್ತಮ ಒಡನಾಟ ಇದೆ. ಸಿಡಿ ಪ್ರಕರಣದಲ್ಲಿ ರಮೇಶಣ್ಣನನ್ನು ಎಳೆತಂದದ್ದು ನೋವಿನ ಸಂಗತಿ. ಯುವತಿಗೆ ಕೆಲ್ಸ ಕೊಡಿಸುವ ನೆಪದಲ್ಲಿ ಮೋಸ ಮಾಡಲಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ. ಆ ವಿಡಿಯೋ ನೋಡಿದ್ರೆ ಮೋಸ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಾ? ವ್ಯವಸ್ಥಿತವಾಗಿ ಹನಿಟ್ರ್ಯಾಪ್​ನಂತೆ ಇದನ್ನ ಮಾಡಿಸಿದ್ದಾರೆ. ಸಿಬಿಐನಿಂದ ತನಿಖೆ ಆಗಬೇಕು. ರಮೇಶಣ್ಣ ತಪ್ಪು ಮಾಡಿದ್ರೆ ಅವ್ರನ್ನ ಗಲ್ಲಿಗೇರಿಸಲಿ ಎಂದರು


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ