ಗೋಕಾಕ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನು ಹೆಡಮುರಿ ಕಟ್ಟಲು ಪೊಲೀಸರು ರೆಡಿಯಾಗಿದ್ದಾರೆ, ಮತ್ತೊಂದೆಡೆ ಬೀಸೋ ದೊಣ್ಣೆಯಿಂದ ಪಾರಾಗಲು ಹರಸಾಹಸ ನಡೆಸಿದ್ದಾರೆ.
ಪ್ರಕಟವಾಗುತ್ತಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಗೋಕಾಕ ಪೊಲೀಸರು ಈಗ ದಂಧೆಕೋರರ ಉದ್ದನೆಯ ಪಟ್ಟಿ ಹಿಡಿದುಕೊಂಡು ನಗರದಲ್ಲಿ ಸಂಚರಿಸತೊಡಗಿದ್ದಾರೆ.
ಸುಮಾರು 20 ಕ್ಕೂ ಹೆಚ್ಚು ಬುಕ್ಕಿಗಳ ಪೈಕಿ 15 ಬುಕ್ಕಿಗಳನ್ನು ಗೋಕಾಕ ಡಿಎಸ್ಪಿಯವರು ಎಲ್ಲರನ್ನು ಕರೆಯಿಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರ ಕ್ರಮದಿಂದ ಬೆಚ್ಚಿಬಿದ್ದ ಇನ್ನೂ ಕೆಲವರು ಊರು ಬಿಟ್ಟಿದ್ದಾರೆ, ಗಮನಿಸಬೇಕಾದ ಸಂಗತಿ ಎಂದರೆ,ಇನ್ನೂ ಕೆಲ ಬುಕ್ಕಿಗಳು ತಮಗೇನು ಸಂಬಂಧವಿಲ್ಲ ಎನ್ನುವಂತೆ ತಮ್ಮ ಅಂಗಡಿಯಲ್ಲಿಯೇ ಕುಳಿತುಕೊಂಡಿದ್ದಾರೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಬೆಳವಣಿಗೆ ಎಂದರೆ, ಕೆಲ ಬುಕ್ಕಿಗಳು ಪೊಲೀಸರಿಂದ ಪಾರು ಮಾಡುವಂತೆ ಕೋರಿ ಅಲ್ಲಿರುವ ಪ್ರಭಾವಿ ರಾಜಕಾರಣಿಯ ಅಳಿಯನ ಮನೆಯತ್ತ ದಾಪು ಗಾಲು ಹಾಕುತ್ತಿದ್ದಾರಂತೆ, ಆದರೆ ಸಧ್ಯದ ಬೆಳವಣಿಯನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಿರುವ ಅವರು ಬುಕ್ಕಿಗಳನ್ನು ಮನೆ ಹತ್ತಿರಕ್ಕೂ ಬಿಟ್ಟು ಕೊಡುತ್ತಿಲ್ಲ ಎಂದು ಹೇಳಲಾಗಿದೆ.
Laxmi News 24×7